ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ರಾಜೇಶ್ ಅರುಳುವ ಮುಂಚೆವೇ ಬಾಡಿಹೋದ ಕನ್ನಡದ ಯುವ ಕಲಾವಿದ. ನಾಗರಹೊಳೆ ಹತ್ತಿರದ ಬಳ್ಳೆ ಹಾಡಿನವರಾದ ರಾಜೇಶ್ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿ.
ರಿಯಾಲಿಟಿ ಸೋ ಮೂಲಕ ಬೆಳಕಿಗೆ ಬಂದ ರಾಜೇಶ್ ನಂತರ ತನ್ನ ಪೇವರೇಟ್ ಹಿರೋ ಪುನೀತ್ ರಾಜಕುಮಾರ್ ರನ್ನು ಭೇಟಿಯಾಗಿ, ತಾನು ಕೂಡ ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ. ಬಹು ನಿರೀಕ್ಷೆಯಿಂದ ಮಾಡಿದ್ದ ಜಂಗಲ್ ಜಾಕಿ ಚಿತ್ರ ನೆಲಕಚ್ಚಿತು. ಮತ್ತೆ ಕಷ್ಟ ಪಟ್ಟು ಮಾಡಿದ ಲವ್ ಇಸ್ ಪಾಯಿಸನ್ ಚಿತ್ರದ ಶೂಟಿಂಗ್ ಮುಗಿದರೂ ಚಿತ್ರ ಬಿಡುಗಡೆಗೆ ನಿಧಾನವಾಗತೊಡಗಿತು. ಚಿತ್ರರಂಗದಲ್ಲಿ ಯಶಸ್ಸು ಸಾಧಿಸಲು ವಿಫಲನಾದೆನೆಂಬ ಹತಾಶೆಯಿಂದ ಮೈಸೂರಿನ ತನ್ನ ಮನೆಯ ಮಹಡಿಯ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡರು. ರಾಜೇಶ್ ಗೆ ಪದೇ ಪದೇ ತೆಲೆ ಸುತ್ತು ಬರುತ್ತಿದ್ದರಿಂದ ಕಾಲು ಜಾರಿ ಬಿದ್ದು ಮಡಿದಿರಬಹುದು ಎಂಬ ಇನ್ನೊಂದು ವಾದ.