ರಾಜೇಶ್ ನಟರಂಗ ಜೀವನಚರಿತ್ರೆ

  ರಾಜೇಶ್ ನಟರಂಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ . ತಮ್ಮ ಪ್ರಬುದ್ಧ ನಟನೆಯಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲೂ ಛಾಪು ಮೂಡಿಸಿದ್ದಾರೆ.

  ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಜೇಶ್ ಬಸವನ ಗುಡಿಯ ನಾಷನಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಇಲ್ಲಿ ಓದುವಾಗ ಅಭಿನಯದ ಬಗ್ಗೆ ಆಸಕ್ತಿ ತೆಳೆದ ರಾಜೇಶ್ `ನಟರಂಗ' ಎಂಬ ರಂಗಸಂಸ್ಥೆ ಸೇರಿದರು.


  ಪದವಿ ನಂತರ ಕೆಲಕಾಲ ದೆಹಲಿಗೆ ತೆರಳಿದ್ದ ರಾಜೇಶ್ ನಂತರ ಮರಳಿ ಬಂದು `ಸ್ಮಶಾನ ಕುರುಕ್ಷೇತ್ರ' ಎಂಬ ಧಾರಾವಾಹಿಯ ಪ್ರೊಡಕ್ಷನ್ಸ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದರು. ನಂತರ ಕಿರುತೆರೆ ವಾಹಿನಿ ಉದಯ ಟಿವಿಯ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ ಇವರು ಸೀರಿಯಲ್ ಗಳಲ್ಲಿ ಅಭನಯಿಸಲು ಪ್ರಾರಂಭಿಸಿದರು.

   `ಮಾಯಾಮೃಗ',`ಮುಕ್ತ',`ಬದುಕು',`ಶಕ್ತಿ',`ಗುಪ್ತ ಗಾಮಿನಿ' ಮುಂತಾದ ಧಾರಾವಾಹಿಗಳಲ್ಲಿ ಭಿನ್ನ ಭಿನ್ನ ಪಾತ್ರದಲ್ಲಿ ಮಿಂಚಿದರು.

  ಹಲವು ಕಿರುತೆರೆ ಸೀರಿಯಲ್ ಗಳಿಗೆ ಸ್ಕ್ರಿಪ್ಟ್ ಬರೆದಿರುವ ಇವರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X