twitter
    Celebs»Rajesh»Biography

    ರಾಜೇಶ್ (ವಿದ್ಯಾಸಾಗರ) ಜೀವನಚರಿತ್ರೆ

    ಕಲಾ ತಪಸ್ವಿ ಎಂದೇ ಬಿರುದಾಂಕಿತರಾದ ರಾಜೇಶ್ ಕನ್ನಡ ಚಿತ್ರರಂಗ ಕಂಡ ಮೇರು ನಟರಲೊಬ್ಬರು. 1932 ಎಪ್ರಿಲ್ 15 ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಮೂಲ ಹೆಸರು ಮುನಿಚೌಡಪ್ಪ. 60 ಮತ್ತು 70 ರ ದಶಕದಲ್ಲಿ ಹಲವು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದ ರಾಜೇಶ್ ನಂತರ ಪೋಷಕ ಪಾತ್ರಗಳಿಗೂ ಜೀವ ತುಂಬಿದರು. 

     

    ಬಾಲ್ಯದಿಂದಲೇ ನಾಟಕಗಳತ್ತ ಆಸಕ್ತಿ ಬೆಳೆಸಿಕೊಂಡ ರಾಜೇಶ್ ಸುದರ್ಶನ ನಾಟಕ ಮಂಡಳಿ ಸೇರಿದರು. ಮನೆಯಲ್ಲಿ ಟ್ಯೂಶನ್ ಹೋಗುತ್ತಿದ್ದೇನೆಂದು ಹೇಳಿ, ತಂದೆ-ತಾಯಿಗೆ ಗೊತ್ತಿಲ್ಲದಂತೆ ನಾಟಕ ಮಂಡಳಿಗೆ ಹೋಗುತ್ತಿದ್ದರು. ಒಂದು ನಾಟಕದ ಬಿತ್ತಿಪತ್ರದ ಮೂಲಕ ತಂದೆ-ತಾಯಿಗೆ ಗೊತ್ತಾಯಿತು. ಶಿಕ್ಷಣದ ನಂತರ ರಾಜೇಶ್ ಟೈಪಿಸ್ಟ್ ಸರ್ಕಾರಿ ಉದ್ಯೋಗ ಸೇರಿದರು. ಉದ್ಯೋಗದಲ್ಲಿದ್ದಾಗಲೇ ಹಲವ ನಾಟಕಗಳನ್ನು ಬರೆಯುತ್ತಾ ಮತ್ತು ಕೆಲವುಗಳಲ್ಲಿ ನಟಿಸುತ್ತಾ ಹೊರಟಿದ್ದ ರಾಜೇಶ್ ಅವರಿಗೆ ಮೊದಲು ಚಿತ್ರರಂಗಕ್ಕೆ ಪರಿಚಯಿಸಿದ್ದು ಹುಣಸೂರು ಕೃಷ್ಣಮೂರ್ತಿ. ಅವರ ವೀರಸಂಕಲ್ಪ ಚಿತ್ರದ ಮೂಲಕ ರಾಜೇಶ್ ಕನ್ನಡ ಚಿತ್ರರಂಗ ಪ್ರವೇಶಿಸಿದರು.

     

    ನಂತರ ` ಶ್ರೀರಾಮಾಂಜನೇಯ ಯುದ್ಧ', `ಗಂಗೆ ಗೌರಿ' ಮುಂತಾದ ಚಿತ್ರಗಳಲ್ಲಿ ನಟಿಸಿ ಕೆಲವು ಕಾರಣಗಳಿಂದ ಎರಡು ವರ್ಷ ಬ್ರೇಕ್ ತೆಗೆದುಕೊಂಡರು. 1968 ರಲ್ಲಿ ರಾಜೇಶ್ ಹೆಸರಿನಿಂದ `ನಮ್ಮ ಊರು' ಚಿತ್ರದ ಮೂಲಕ ನಾಯಕನಾಗಿ ಹೊರ ಹೊಮ್ಮಿದರು. ನಂತರ ದೇವರ ದುಡ್ಡು, ಬಾಳು ಬಂಗಾರವಾಯಿತು, ಮುಗಿಯದ ಕಥೆ ಸೇರಿದಂತೆ ಹಲವಾರು ಸಮಾಜಿಕ ಚಿತ್ರಗಳಲ್ಲಿ ಅಭಿನಯಿಸಿದರು. ನಂತರ ಪಿತಾಮಹ, ಸೂತ್ರಧಾರ ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದಾರೆ.

     

    ಚಿತ್ರರಂಗದಲ್ಲಿನ ಇವರ ಅಪಾರ ಸೇವೆಗೆ 2012 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ಇವರು ಪುತ್ರಿ `ಆಶಾರಾಣಿ' ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ ಸರ್ಜಾ ಇವರ ಅಳಿಯ.

     

    ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ರಾಜೇಶ್ ರನ್ನು ಫೆಬ್ರವರಿ 9, 2022 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ಹತ್ತು ದಿನಗಳ ನಂತರ ಫೆಬ್ರವರಿ 19, ಶನಿವಾರ ಮುಂಜಾನೆ ಕೊನೆಯುಸಿರೆಳೆದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X