ರಾಕೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ಗಾಯಕ. `ಜೋಶ್' ಚಿತ್ರದಿಂದ ಮುನ್ನೆಲೆಗೆ ಬಂದ ರಾಕೇಶ್, ನಂತರ `ಮನಸಾಲಜಿ', ಮಂದಹಾಸ' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.
ಕೆಲ ಚಿತ್ರಗಳಲ್ಲಿ ಖಳನಾಯಕನಾಗಿಯೂ ನಟಿಸಿರುವ ರಾಕೇಶ್ `ಕೋಟಿಗೊಂದು ಲವ್ ಸ್ಟೋರಿ' ಚಿತ್ರದಲ್ಲಿ ಹಿನ್ನಲೆ ಗಾಯಕನಾಗಿ ಒಂದು ಗೀತೆಯನ್ನು ಹಾಡಿದ್ದರು. ರ್ಯಾಪ್ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1ರಲ್ಲಿ ಭಾಗವಹಿಸಿದ್ದ ರಾಕೇಶ್, ಅಲ್ಲಿಂದ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರನ್ನರ್ ಆಗಿ ಹೊರಹೊಮ್ಮಿದ್ದರು.