ರಾಮ್ ಗೋಪಾಲ್ ವರ್ಮ ಜೀವನಚರಿತ್ರೆ

  ಹೈದರಾಬಾದಿನಲ್ಲಿ ಜನಿಸಿದ ರಾಮ ಗೋಪಾಲ ವರ್ಮಾ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಚಿತ್ರಗಳಿಂದ ಮಾತ್ರವಲ್ಲದೇ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೂ ಪ್ರಸಿದ್ಧರಾಗಿದ್ದಾರೆ. ಶಾಲೆಯಲ್ಲಿ ಅಷ್ಟಾಗಿ ಚುರುಕಿಲ್ಲದ ಕಾರಣ ನಿಯಮಿತವಾಗಿ ಶಾಲೆಗೆ ಚಕ್ಕರ್ ಹಾಕುತ್ತಿದ್ದರು.

  ಸಿನಿಪಯಣ

  `ಕಲೆಕ್ಟರ್ ಗಾರಿ ಅಬ್ಬಾಯಿ',`ರಾವಗಾರಿಲ್ಲು' ಚಿತ್ರಗಳ ಮೂಲಕ ಸಹಾಯಕ ನಿರ್ದೇಶಕನಾಗಿ ತೆಲಗು ಚಿತ್ರರಂಗ ಪ್ರವೇಶಿಸಿದ ವರ್ಮಾ ಅಕಸ್ಮಿಕವಾಗಿ ನಾಗಾರ್ಜುನರನ್ನು ಭೇಟಿಯಾಗುತ್ತಾರೆ. ನಾಗಾರ್ಜುನರಿಗೆ ತಾವು ನಿರ್ದೇಶಿಸಿ ಬೇಕೆಂದಿರುವ ಚಿತ್ರದ ಒಂದು ದೃಶ್ಯವನ್ನು ಮನಮುಟ್ಟುವ ಹಾಗೇ ವಿವರಿಸಿದಾಗ ನಾಗಾರ್ಜುನ ನಟಿಸಲು ಒಪ್ಪಿಕೊಳ್ಳುತ್ತಾರೆ. ನಂತರ ಇವರಿಬ್ಬರ ಕಸರತ್ತಿನಲ್ಲಿ ತಯಾರಾದ `ಶಿವ' ಚಿತ್ರದ ಮೂಲಕ ರಾಮ್ ಗೋಪಾಲ್ ವರ್ಮಾ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಾರೆ. ಈ ಚಿತ್ರ ತೆಲಗು ಸಿನಿರಂಗದಲ್ಲಿ ದಾಖಲೆ ಪ್ರದರ್ಶನ ಕಂಡು ಹಿಂದಿಗೂ ರೀಮೇಕ್ ಆಗುತ್ತದೆ. ಹಿಂದಿಯಲ್ಲೂ ವರ್ಮಾರವರೇ ನಿರ್ದೇಶನ ಮಾಡುತ್ತಾರೆ. ಹಿಂದಿ ಚಿತ್ರರಂಗದಲ್ಲಿ ರಾಮ್ ಗೋಪಾಲ್ ವರ್ಮಾರಿಗೆ ಭದ್ರನೆಲೆ ಒದಗಿಸಿದ ಚಿತ್ರ ಅಮೀರ ಖಾನ್ ಅಭಿನಯುದ `ರಂಗೀಲಾ'.

  ಇವರು ನಿರ್ದೇಶಿಸಿದ `ಪೂಂಕ್'  ಹಿಂದಿ ಹಾರರ್ ಸರಣಿ ಚಿತ್ರಗಳಲ್ಲಿ ಕಿಚ್ಚ ಸುದೀಪ್ ನಾಯಕನಟನಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಇವರು ನಿರ್ದೇಶಿಸಿದ ಮೊದಲ ಚಿತ್ರ ಶಿವರಾಜಕುಮಾರ್ ನಾಯಕನಾಗಿ ನಟಿಸಿದ `ಕಿಲ್ಲಿಂಗ್ ವೀರಪ್ಪನ್'. ನಂತರ ಡಾಲಿ ಧನಂಜಯ ನಾಯಕನಾಗಿ ನಟಿಸಿದ `ಭೈರವ ಗೀತಾ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X