X
ಹೋಮ್ » ಸೆಲಬ್ರಿಟಿಗಳು » ರಾಮ್ ಗೋಪಾಲ್ ವರ್ಮ
ರಾಮ್ ಗೋಪಾಲ್ ವರ್ಮ

ರಾಮ್ ಗೋಪಾಲ್ ವರ್ಮ

Director/Producer
ಜೀವನ ಚರಿತ್ರೆ :  ಹೈದರಾಬಾದಿನಲ್ಲಿ ಜನಿಸಿದ ರಾಮ ಗೋಪಾಲ ವರ್ಮಾ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಚಿತ್ರಗಳಿಂದ ಮಾತ್ರವಲ್ಲದೇ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೂ ಪ್ರಸಿದ್ಧರಾಗಿದ್ದಾರೆ. ಶಾಲೆಯಲ್ಲಿ ಅಷ್ಟಾಗಿ ಚುರುಕಿಲ್ಲದ ಕಾರಣ ನಿಯಮಿತವಾಗಿ ಶಾಲೆಗೆ ಚಕ್ಕರ್ ಹಾಕುತ್ತಿದ್ದರು. ಸಿನಿಪಯಣ `ಕಲೆಕ್ಟರ್ ಗಾರಿ ಅಬ್ಬಾಯಿ',`ರಾವಗಾರಿಲ್ಲು' ಚಿತ್ರಗಳ ಮೂಲಕ ಸಹಾಯಕ ನಿರ್ದೇಶಕನಾಗಿ ತೆಲಗು ಚಿತ್ರರಂಗ ಪ್ರವೇಶಿಸಿದ ವರ್ಮಾ ಅಕಸ್ಮಿಕವಾಗಿ ನಾಗಾರ್ಜುನರನ್ನು ಭೇಟಿಯಾಗುತ್ತಾರೆ. ನಾಗಾರ್ಜುನರಿಗೆ ತಾವು ನಿರ್ದೇಶಿಸಿ ಬೇಕೆಂದಿರುವ ಚಿತ್ರದ ಒಂದು ದೃಶ್ಯವನ್ನು ಮನಮುಟ್ಟುವ ಹಾಗೇ ವಿವರಿಸಿದಾಗ ನಾಗಾರ್ಜುನ ನಟಿಸಲು ಒಪ್ಪಿಕೊಳ್ಳುತ್ತಾರೆ. ನಂತರ ಇವರಿಬ್ಬರ ಕಸರತ್ತಿನಲ್ಲಿ ತಯಾರಾದ `ಶಿವ' ಚಿತ್ರದ ಮೂಲಕ ರಾಮ್ ಗೋಪಾಲ್ ವರ್ಮಾ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಾರೆ. ಈ ಚಿತ್ರ ತೆಲಗು ಸಿನಿರಂಗದಲ್ಲಿ ದಾಖಲೆ ಪ್ರದರ್ಶನ ಕಂಡು ಹಿಂದಿಗೂ ರೀಮೇಕ್ ಆಗುತ್ತದೆ. ಹಿಂದಿಯಲ್ಲೂ ವರ್ಮಾರವರೇ ನಿರ್ದೇಶನ ಮಾಡುತ್ತಾರೆ. ಹಿಂದಿ ಚಿತ್ರರಂಗದಲ್ಲಿ ರಾಮ್ ಗೋಪಾಲ್ ವರ್ಮಾರಿಗೆ ಭದ್ರನೆಲೆ ಒದಗಿಸಿದ ಚಿತ್ರ ಅಮೀರ ಖಾನ್ ಅಭಿನಯುದ `ರಂಗೀಲಾ'. ಇವರು ನಿರ್ದೇಶಿಸಿದ `ಪೂಂಕ್'  ಹಿಂದಿ ಹಾರರ್ ಸರಣಿ ಚಿತ್ರಗಳಲ್ಲಿ ಕಿಚ್ಚ ಸುದೀಪ್ ನಾಯಕನಟನಾಗಿ ನಟಿಸಿದ್ದಾರೆ. ಕನ್ನಡದಲ್ಲಿ ಇವರು ನಿರ್ದೇಶಿಸಿದ ಮೊದಲ ಚಿತ್ರ ಶಿವರಾಜಕುಮಾರ್ ನಾಯಕನಾಗಿ ನಟಿಸಿದ `ಕಿಲ್ಲಿಂಗ್ ವೀರಪ್ಪನ್'. ನಂತರ ಡಾಲಿ ಧನಂಜಯ ನಾಯಕನಾಗಿ ನಟಿಸಿದ `ಭೈರವ ಗೀತಾ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಮುಂದೆ ಓದಿ

ರಾಮ್ ಗೋಪಾಲ್ ವರ್ಮ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Director
ರಾಮ್ ಗೋಪಾಲ್ ವರ್ಮ 18 Jul 2025
ಸಿದ್ದಾರ್ಥ್ ತಟೋಲು 07 Dec 2018
ರಾಮ್ ಗೋಪಾಲ್ ವರ್ಮ 01 Jan 2016

ರಾಮ್ ಗೋಪಾಲ್ ವರ್ಮ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಮ್ ಗೋಪಾಲ್ ವರ್ಮ

ಹೆಸರು ರಾಮ್ ಗೋಪಾಲ್ ವರ್ಮ
ಹುಟ್ಟಿದ ದಿನ 07 Apr 1962
ವಯಸ್ಸು 64
ಹುಟ್ಟಿದ ಸ್ಥಳ Vijayawada, Andhra Pradesh.
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಮ್ ಗೋಪಾಲ್ ವರ್ಮ ಆಸ್ತಿ

ಆಸ್ತಿ

ರಾಮ್ ಗೋಪಾಲ್ ವರ್ಮ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+