ರಂಭಾ ಸಪ್ತಭಾಷಾ ನಟಿ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ಇವರ ಬಾಲ್ಯದ ಹೆಸರು ವಿಜಯಲಕ್ಷ್ಮಿ. 1992ರಲ್ಲಿ ತೆರೆಕಂಡ ಮಲಯಾಳಂನ `ಸರ್ಗಂ' ಸಿನಿಮಾದಿಂದ ಸಿನಿಪಯಣ ಆರಂಭಿಸಿದರು. ಅದೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ `ಆ ಒಕ್ಕಟಿ ಅಡಕ್ಕು' ಚಿತ್ರದಲ್ಲಿನ `ರಂಭಾ' ಪಾತ್ರದಿಂದ ಗಮನ ಸೆಳೆದರು. ಮುಂದೆ ಈ ಪಾತ್ರದ ಹೆಸರೇ ಇವರ ಹೆಸರಾಯಿತು.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಭೋಜಪುರಿ, ಬೆಂಗಾಳಿ ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಂಭಾ, ಕೆಲವು ಕಿರುತೆರೆ ಶೋಗಳಲ್ಲಿ ಜಡ್ಜ ಆಗಿಯೂ ಕೆಲಸ ಮಾಡಿದ್ದಾರೆ. 2003ರಲ್ಲಿ ತಮ್ಮ ಸಹೋದರನ ಜೊತೆ ಸೇರಿ `3 ರೋಜ್ಸ' ಎಂಬ ಚಿತ್ರ ನಿರ್ಮಿಸಿ ತುಂಬಾ ನಷ್ಟ ಅನುಭವಿಸಿದರು. 2010ರಲ್ಲಿ ಟೊರೊಂಟೊದಲ್ಲಿ ನೆಲೆಸಿದ ಭಾರತೀಯ ಉದ್ಯಮಿ ಇಂದ್ರಕುಮಾರವರನ್ನು ವರಿಸಿದ ರಂಭಾಗೆ ಇಬ್ಬರು ಪುತ್ರಿಯಿದ್ದಾರೆ. ಕೆಲಕಾಲ ಚಿತ್ರರಂಗದಿಂದ ವಿರಾಮ ತೆಗೆದುಕೊಂಡು ಕೆನೆಡಾದಲ್ಲಿ ನೆಲೆಸಿದ್ದ ರಂಭಾ 2016ರಲ್ಲಿ ಮತ್ತೆ ಭಾರತಕ್ಕೆ ಬಂದರು.
ಕನ್ನಡ ಸಿನಿಮಾ
ಸರ್ವರ್ ಸೋಮಣ್ಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ನಂತರ `ಓ ಪ್ರೇಮವೇ',`ಭಾವ ಭಾಮೈದ',`ಸಾಹುಕಾರ',`ಪಾಂಡುರಂಗ ವಿಠ್ಠಲ',`ಗಂಡುಗಲಿ ಕುಮಾರರಾಮ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.