ರಮೇಶ್ ಅರವಿಂದ್ ಜೀವನಚರಿತ್ರೆ

  ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರಾದ ರಮೇಶ್ ಅರವಿಂದ್ ಇವರು ಜನಿಸಿದ್ದು ಸೆಪ್ಟೆಂಬರ್ 10, 1964ರಲ್ಲಿ . ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಜೀನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ತಮ್ಮ ಕಾಲೇಜು ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಿನಿಮಾ ಸೇರುವ ಆಸಕ್ತಿಯನ್ನು ಬೆಳೆಸಿಕೊಂಡರು.

  ಕೆ.ಬಾಲಚಂದ್ರ ನಿರ್ದೇಶನದ "ಸುಂದರ ಸ್ವಪ್ನಗಳು" ಮೂಲಕ ಇವರು ಚಿತ್ರರಂಗ ಪ್ರವೇಶ ಮಾಡಿದರು. ಈ ಮೊದಲು ಬೆಂಗಳೂರು ದೂರದರ್ಶನದಲ್ಲಿ 'ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. "ರಾಮ ಶಾಮ ಭಾಮ" ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ "ಹೂಮಳೆ" ಮತ್ತು "ಅಮೃತಧಾರೆ" ಚಿತ್ರಕಥೆಗೆ ನೆರವು ನೀಡಿದ್ದಾರೆ.

  ತಮಿಳು ಚಿತ್ರರಂಗದಲ್ಲಿಯೂ ರಮೇಶ್ ಅರವಿಂದ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದಾರೆ. ಉತ್ತಮ ವಿಲನ್ ಚಿತ್ರದ ಮೂಲಕ ತಮಿಳು ಚಿತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೀಗೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ನಟನೆ ಹಲವು ಪ್ರಶಸ್ತಿಗಳು ಸಹ ಲಭಿಸಿವೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X