ರನ್ಯಾ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.2014 ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ `ಮಾಣಿಕ್ಯ' ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದರು.
1993 ರಲ್ಲಿ ಚಿಕ್ಕಮಗಳೂರಿನಲ್ಲಿ ಜನಿಸಿದರು. ಬಾಲ್ಯದ ವಿಧ್ಯಾಭ್ಯಾಸ ಕೊಡಗಿನಲ್ಲಿ ಮುಗಿಯಿಸಿ ದಯಾನಂದ ಸಾಗರ್ ಇಂಜನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆಯಲು ಸೇರಿದರು. ನಂತರ ನಟನೆಯಲ್ಲಿನ ಆಸಕ್ತಿಯಿಂದಾಗಿ ಕಾಲೇಜ್ ತೊರೆದು ಮುಂಬೈನ ನಮಿತ್ ಕಿಶೋರ್ ನಟನಾ ತರಬೇತಿ ಸಂಸ್ಥೆಗೆ ಸೇರದರು. ಇದೇ ಸಮಯದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕೂಡ ಇಳಿದರು.
ಮಾಣಿಕ್ಯ ಚಿತ್ರದ ನಂತರ ರನ್ಯಾ, ಗಣೇಶ್‌ರ `ಪಟಾಕಿ' ಚಿತ್ರದಲ್ಲಿ ನಟಿಸಿದರು. ತಮಿಳಿನಲ್ಲಿ ವಿಕ್ರಮ್ ಅಭಿನಯದ `ವಾಘಾ' ಚಿತ್ರದಲ್ಲಿ ನಟಿಸಿದ್ದಾರೆ.