RJ ಪೃಥ್ವಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ರೇಡಿಯೋ ಜಾಕಿ. ಫಿವರ್ 104 ಎಫ್.ಎಮ್ ರೇಡಿಯೋದ ಮ್ಯಾಡ್ ಮಾರ್ನಿಂಗ್ ಕಾರ್ಯಕ್ರಮದ ಮೂಲಕ ಪ್ರಸಿದ್ಧರಾಗಿದ್ದಾರೆ. ರಾಷ್ಟ್ರ ಮಟ್ಟದ ಟೆನ್ನಿಸ್ ಆಟಗಾರ. ವಿಮಾನ ಚಾಲನೆ ಗೊತ್ತಿರುವ ವೃತ್ತಿಪರ ಪೈಲಟ್ ಲೈಸನ್ಸ್ ಹೊಂದಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 7 ಎಲ್ಲಾ ಸ್ಪರ್ದಿಗಳು ಜೀವನ ಚಿತ್ರಣ
ಸುಮಾರು 18 ವರ್ಷಗಳ ಕಾಲ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಟೆನ್ನಿಸ್ ರ‍್ಯಾಂಕಿಂಗ್ ನಲ್ಲಿ 6 ನೇ ಸ್ಥಾನ ಮತ್ತು ರಾಷ್ಟೀಯ ಟೆನ್ನಿಸ್ ರ‍್ಯಾಂಕಿಂಗ್ ನಲ್ಲಿ 42 ನೇ ಪಡೆದಿದ್ದರು. ಆದರೆ ತಮ್ಮ ಮಣಿಕಟ್ಟಿಗೆ ಆದ ಗಾಯದಿಂದ ಟೆನ್ನಿಸ್ ಗೆ ವಿದಾಯ ಹೇಳಿದರು. ಪೃಥ್ವಿ ಅಪರೂಪದ ಪೋಟೊಗಳು
2001 ರಿಂದ ರೇಡಿಯೊ ಜಾಕಿಯಾಗಿ ಕಾರ್ಯ ನಿರ್ವಹಿಸಿತೊಡಗಿದರು . 2008 ರಲ್ಲಿ ಇಂಡಿಯನ್ ಎಕ್ಸಲೆನ್ಸ್ ಅವಾರ್ಡ್ ನಲ್ಲಿ ಆರ್.ಜೆ. ಆಫ್ ದಿ ಇಯರ್ ಪ್ರಶಸ್ತಿ ಪಡೆದರು. ಇವರು ನೆಡೆಸಿಕೊಟ್ಟ ಗುಡ್ ಮಾರ್ನಿಂಗ್ ಬೆಂಗಳೂರು, ರಪ್ಪ ರೇಡಿಯೋ, ಬರ್ತಡೇ ಬಕ್ರಾ ಮುಂತಾದ ಕಾರ್ಯಕ್ರಮಗಳು ಬೆಸ್ಟ್ ರೇಡಿಯೋ ಶೋ ಗಳಾಗಿ ಪ್ರಶಸ್ತಿ ಪಡೆದಿವೆ. 2011 ರಲ್ಲಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಮೊದಲ ಅಂತರಾಷ್ಟ್ರೀಯ ರೇಡಿಯೋ ಫೆಸ್ವಿವಲ್ ನಲ್ಲಿ ಭಾರತದಿಂದ ಇವರೊಬ್ಬರನ್ನೇ ಆಹ್ವಾನ ಮಾಡಲಾಗಿತ್ತು.2013 ರಲ್ಲಿ ತೆರೆಕಂಡ `ಮನಿ ಹನಿ ಶನಿ' ಚಿತ್ರದಲ್ಲಿ ನಟಿಸಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 7
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬಂದಿರುವ ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.