ರಾಕಲೈನ್ ಸುಧಾಕರ್ ಕನ್ನಡದ ಪ್ರಮುಖ ಹಿರಿಯ ಪೋಷಕ ನಟ ಮತ್ತು ಹಾಸ್ಯ ನಟ. ಇವರು `ಮನಸಾರೆ',`ಪಂಚರಂಗಿ',`ಟೋಪಿವಾಲಾ',`ಅಯ್ಯೊ ರಾಮ',`ಪ್ರೀತಿಯ ರಾಯಭಾರಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದ ಸುಧಾಕರ್ ಮೊದಮೊದಲು ಆಟೋ ಓಡಿಸಿದ್ರು, ನಂತರ ಕಬ್ಬನ್ ಪಾರ್ಕ್ ನಲ್ಲಿ ಚಿಪ್ಸ್ ಮಾರುತ್ತಿದ್ದರು.ಈ ಮಧ್ಯೆ ರಾಕ್‌ಲೈನ್ ವೆಂಕಟೇಶ್ ರ ಪರಿಚಯವಾಗಿ, ಅವರ ತೋಟ ನೋಡಿಕೊಳ್ಳುವ ಕೆಲಸ ಪಡೆದರು.
ಮುಂದೆ ರಾಕ್‌ಲೈನ್ ಕುಟುಂಬಕ್ಕೆ ತುಂಬಾ ಹತ್ತಿರವಾದ ಸುಧಾಕರ್, ಹಲವುಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅವರ ಜೊತೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ರಾಕ್ಲೈನ್ ಸಹ ಕೆಲವು ಜವಾಬ್ದಾರಿಗಳನ್ನು ವಹಿಸಿದ್ದರು. ರಾಕ್ಲೈನ್ ಸಂಸ್ಥೆಯಲ್ಲಿ ಎಕ್ಸಿಕ್ಯೂಟಿವ್ ಆಗಿ ಸುಧಾಕರ್ ಸುಮಾರು ವರ್ಷ ಕೆಲಸ ಮಾಡಿದ್ದಾರೆ.
ಯೋಗರಾಜ್ ಭಟ್ಟರು ಮನಸಾರೆ ಚಿತ್ರ ಮಾಡುತ್ತಿದ್ದಾಗ, ಸುಧಾಕರ್ ರವರಿಗೆ ಒಂದು ಪಾತ್ರ ನೀಡಲು ನಿರ್ಧರಿಸಿದರು. ಇಲ್ಲಿಂದ ಆರಂಭವಾದ ಇವರ ಸಿನಿ ಜರ್ನಿ 199 ಚಿತ್ರಗಳವರೆಗೆ ಸಾಗಿತು. ಮುಂದೆ ಕೆಲ ಭಿನ್ನಾಭಿಪ್ರಾಯಗಳಿಂದ ರಾಕ್‌ಲೈನ್ ಸಂಸ್ಥೆಯಿಂದ ಹೊರಬಂದು ಸ್ವತಂತ್ರವಾಗಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು.
ಸೆಪ್ಟೆಂಬರ್24, 2020 ರಂದು ತಮ್ಮ 200 ನೇ ಚಿತ್ರ `ಶುಗರ್‌ಲೆಸ್' ಚಿತ್ರದ ಶೂಟಿಂಗ್ ನಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದರು.