CelebsbredcrumbRupinibredcrumbBiography

  ರೂಪಿಣಿ ಜೀವನಚರಿತ್ರೆ

  ರೂಪಿಣಿ ಕನ್ನಡ, ತೆಲಗು, ತಮಿಳು ,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಟಿ. ಬಾಲಿವುಡ್ ಚಿತ್ರರಂಗದಲ್ಲಿ ಬಾಲನಟಿಯಾಗಿ ಸಕ್ರಿಯವಾಗಿದ್ದ ಇವರು ನಂತರ ದಕ್ಷಿಣ ಚಿತ್ರರಂಗದ ಪ್ರಮುಖ ನಟಿಯಾಗಿ ಬೆಳೆದರು.

  1969 ನವೆಂಬರ್ 4 ರಂದು ಮುಂಬೈನ ಗುಜರಾತಿ ಕುಟುಂಬದಲ್ಲಿ  ಜನಸಿದ ರೂಪಿಣಿಯ ಬಾಲ್ಯದ ಹೆಸರು ಕೋಮಲ್ ಮಹುವಕರ್. ತಂದೆ ಕಾಂತಿಲಾಲ್ ವಕೀಲ ವೃತ್ತಿಯಲ್ಲಿದ್ದರೆ, ತಾಯಿ ಪ್ರಮೀಳಾ ಡಯಟಿಷಿಯನ್ ಆಗಿದ್ದರು. ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಹೊಂದಿದ್ದ ಇವರು ಅಮಿತಾಭ್ ಬಚ್ಚನ್ ರ `ಮಿಲಿ' ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. 1980 ರಿಂದ ನಾಯಕನಟಿಯಾಗಿ ನಟಿಸಲು ಆರಂಭಿಸಿದರು.

  1988 ರಲ್ಲಿ ತೆರಕಂಡ  ವಿಷ್ಣುವರ್ಧನ್ ರ `ಒಲವಿನ ಆಸರೆ'  ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ರೂಪಿಣಿ ಹತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದರು.  ಅದರಲ್ಲಿ ಆರು ಚಿತ್ರಗಳನ್ನು ವಿಷ್ಣುವರ್ಧನ್ ಜೊತೆ ನಟಿಸಿರುವುದು ವಿಶೇಷ.  `ದೇವ', `ಮತ್ತೇ ಹಾಡಿತು ಕೋಗಿಲೆ', `ನೀನು ನಕ್ಕರೆ ಹಾಲು ಸಕ್ಕರೆ',`ರವಿವರ್ಮ',`ಗೋಪಿ ಕೃಷ್ಣ', `ಸಪ್ತಪದಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  2000 ರಲ್ಲಿ ಮೋಹನ್ ಕುಮಾರ್ ಎಂಬುವವರನ್ನು ವಿವಾಹರಾದ ರೂಪಿಣಿ 2005 ರಲ್ಲಿ ಅವರಿಂದ ವಿಚ್ಚೇದನ ಪಡೆದರು. ಈ ದಂಪತಿಗೆ ಅನಿಶಾ ಎಂಬ ಪುತ್ರಿಯಿದ್ದಾಳೆ.  `ಸ್ಪರ್ಶ ಫೌಂಡೇಶನ್'  ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X