ಸಾನ್ಯಾ ಅಯ್ಯರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು 1998ರ ಸೆಪ್ಟಂಬರ್ 21ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ದೀಪಾ ಅಯ್ಯರ್ ಕೂಡ ನಟಿಯಾಗಿದ್ದಾರೆ.
ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಸಾನ್ಯಾ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟರು. 8ನೇ ತರಗತಿಯವರೆಗೆ ಸೀರಿಯಲ್‌ನಲ್ಲಿ ಅಭಿನಯಿಸಿದ ಇವರು, ನಂತರ ಶಿಕ್ಷಣ ಮುಂದುವರೆಸಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಮಲಯಾಳಂನ ' ಆರಾರೋ..ನೀಯಾರೋ' ಎಂಬ ಆಲ್ಬಂ ಸಾಂಗ್‌ನಲ್ಲಿ ಕಾಣಿಸಿಕೊಂಡರು. ಕನ್ನಡದ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು.
ಬಿಗ್‌ಬಾಸ್: ಕಿಚ್ಚ ಸುದೀಪ್ ನಿರೂಪಣೆಯ ವೂಟ್‌ನಲ್ಲಿ ಪ್ರಸಾರವಾಗಿದ್ದ ಬಿಗ್‌ಬಾಸ್ ಕನ್ನಡ ಓಟಿಟಿ ಸೀಸನ್ 1ರಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.
ಬೆಳ್ಳಿತೆರೆ
'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಸಾನ್ಯಾ, ಇದೀಗ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ.