ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತಮ್ಮ ಅದ್ಭುತ ಅಭಿನಯಕ್ಕೆ ಹೆಸರಾಗಿರುವ ಸಮಂತಾ ರುತ್ ಪ್ರಭು 1987ರ ಎಪ್ರಿಲ್ 28ರಂದು ಚೆನ್ನೈನಲ್ಲಿ ಜನಿಸಿದರು.
ವಾಣಿಜ್ಯ ಪದವಿ ಓದುವಾಗ ಪಾರ್ಟ್ ಟೈಮ್ ಮಾಡೆಲಿಂಗ್ ಮಾಡಿಕೊಂಡಿದ್ದ ಸಮಂತಾ, 2010ರಲ್ಲಿ ತೆರೆಕಂಡ ಗೌತಮ್ ಮೆನನ್ ಅವರ`ಯೇ ಮಾಯಾ ಚೇಸಾವೆ' ತೆಲಗು ಚಿತ್ರದಿಂದ ಸಿನಿಜೀವನ ಪ್ರಾರಂಭಿಸಿದರು. ನಂತರ ತಮಿಳು ಚಿತ್ರಗಳಲ್ಲಿ ಕೂಡ ಮಿಂಚತೊಡಗಿದ ಸಮಂತಾ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವಿಚ್ಚೇದನ: ಸಮಂತಾ ರುತ್ ಪ್ರಭು 2017ರಲ್ಲಿ ತಮ್ಮ ಮೊದಲ ಚಿತ್ರದ ನಾಯಕ ನಾಗ ಚೈತನ್ಯರನ್ನು ವಿವಾಹವಾದರು. ಆದರೆ, 2021ರ ಅಕ್ಟೋಬರ್ 2ರಂದು ಕಾರಣಾಂತರಗಳಿಂದ ಪರಸ್ಪರ ವಿಚ್ಛೇದನ ಪಡೆದರು.