ಸಂಭ್ರಮಾ ಗೌಡ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೀಲಾರ ಗ್ರಾಮದವರು. ತಂದೆ ಶ್ರೀನಿವಾಸ ಕೃಷಿಕರು,ತಾಯಿ ಗಿರಿಜಮ್ಮ ಗೃಹಿಣಿ.ಇವರ ಮೂಲ ಹೆಸರು ದಿವ್ಯಾ.
ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದು ಬಟ್ಟರ ಅಂಗಡಿಯಲ್ಲಿ ಉದ್ಯೋಗಕ್ಕೆ ಸೇರಿದರು. ನಂತರ ಗಾರ್ಮೆಂಟ್ ಮತ್ತು ಟೆಲಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡಿದರು. ನಂತರ ಸ್ನೇಹಿತರ ಸಲಹೆಯಂತೆ ಆದರ್ಶ ನಟನಾ ಸಂಸ್ಥೆಗೆ ಸೇರಿದರು. ಅಲ್ಲಿ ಸುಧಾಕರ್ ಬನ್ನಂಜೆಯವರ `ರಣರಣಕ' ಚಿತ್ರದಲ್ಲಿ ಅವಕಾಶ ಸಿಕ್ಕಿತು.
ಈ ಚಿತ್ರಕ್ಕೂ ಮುಂಚೆ `ಇವಳೇ ವೀಣಾಪಾಣಿ' ಸೀರಿಯಲ್‌ನಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು.
ಸಂಭ್ರಮಾ ನಟಿಸಿದ ಸಿರೀಯಲ್‌ಗಳು
ಲವಲವಿಕೆ
ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ
ಹರಹರ ಮಹಾದೇವ (ರತಿ ಪಾತ್ರ)
ಚಂದ್ರಮುಖಿ (ಐಶ್ವರ್ಯ ಪಾತ್ರ)
ದೊಡ್ಮನೆ ಸೊಸೆ (ವೀಣಾ ಪಾತ್ರ)
ಇವಳೇ ವೀಣಾಪಾಣಿ