X
ಸಂಜಯ್ ದತ್ತ್
Actor

ಸಂಜಯ್ ದತ್ತ್ ಜೀವನ ಚರಿತ್ರೆ

 ಸಂಜಯ್ ದತ್ತ ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಾಯಕ. ಹಲವು ಫಿಲ್ಮ್‍ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಇವರು ಖ್ಯಾತ ಬಾಲಿವುಡ್ ತಾರೆ ಸುನೀಲ್ ದತ್ತ್ ಮತ್ತು ನರ್ಗಿಸ್ ದತ್ತ್ ಪುತ್ರ.

ಹಿನ್ನಲೆ- ತಂದೆ ಸುನೀಲ್ ದತ್ತ್ ಬ್ರಾಹ್ಮಣರಾದರೆ, ತಾಯಿ ನರ್ಗಿಸ್ ಮುಸ್ಲಿಂ ಕುಟುಂಬದಿಂದ ಬಂದವರು. ಹೈ ಸ್ಕೂಲ್ ವಿಧ್ಯಾರ್ಥಿಯಾಗಿದ್ದಾಗ ಮಾದಕ ವಸ್ತುಗಳ ನಶೆಗೆ ದಾಸನಾದ ಸಂಜಯ್ ತನ್ನ ತಾಯಿ ತೀರಿದ ನಂತರ ಇನ್ನಷ್ಟು ಡ್ರಗ್ ಅಡಿಕ್ಟ್ ಆದನು. ನಂತರ ಅಮೇರಿಕಾದ ಪ್ರಸಿದ್ಧ ಮಾದಕ ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಈ ವ್ಯಸನದಿಂದ ಹೊರಬಂದರು.

ವೈಯಕ್ತಿಕ ಜೀವನ- ಸಂಜಯ್ 1987 ರಲ್ಲಿ ರಿಚಾ ಶರ್ಮಾರನ್ನು ವಿವಾಹವಾದರು. ಇವರು 9 ವರ್ಷಗಳ ನಂತರ ಕ್ಯಾನ್ಸರ್ ಗೆ ತುತ್ತಾಗಿ ನಿಧನರಾದರು. ಈ ದಾಂಪತ್ಯದಿಂದ ಜನಿಸಿರುವ ಇವರ ಪುತ್ರಿ ತ್ರಿಶಾಲಾ ದತ್ತ್ ಸದ್ಯ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. 1998 ರಲ್ಲಿ  ರಿಯಾ ಪಿಲ್ಲಾಯಿ ಯನ್ನು ಮದುವೆಯಾದ ಸಂಜಯ್ 2008 ರಲ್ಲಿ ಅವರಿಗೆ ವಿಚ್ಚೇದನ ನೀಡಿ ಮಾನ್ಯತಾ (ದಿಲನವಾಜ್ ಶೇಕ್)ರನ್ನು ವಿವಾಹವಾಗಿದರು. ಈ ದಾಂಪತ್ಯದಿಂದ ಒಬ್ಬ ಪುತ್ರ ಮತ್ತು ಪುತ್ರಿಯರಿದ್ದಾರೆ. 1993 ರಲ್ಲಿ ಮುಂಬೈ ಬಾಂಬ್ ಬ್ಲಾಸ್ಟ್ ಕೇಸಿನಲ್ಲಿ ಇವರನ್ನು ಬಂಧಿಸಲಾಗಿತ್ತು. ನಂತರ ಈ ಕೇಸಿನಿಂದ ಮುಕ್ತರಾದರೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆ ವಿಚಾರದಲ್ಲಿ 5 ವರ್ಷ ಜೈಲು ಶಿಕ್ಷೆ ಅನುಭವಿಸಿದರು.

ಸಿನಿಜೀವನ-  1981 ರಲ್ಲಿ ತೆರೆಕಂಡ ರಾಕಿ ಚಿತ್ರದಿಂದ ಸಿನಿಜೀವನ ಪ್ರವೇಶಿಸಿದರು. ಈ ಚಿತ್ರವನ್ನು ಅವರೇ ತಂದೆ ಸುನೀಲ್ ದತ್ತರೇ ನಿರ್ದೇಶಿಸಿ ನಿರ್ಮಿಸಿದ್ದರು. ನಂತರ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಸಂಜಯ್ ಗೆ ಖಳನಾಯಕ ಚಿತ್ರ ಒಳ್ಳೆ ಇಮೇಜ್ ನೀಡಿತು.  ಸಂಜಯ್ ಸಿನಿಜೀವನಕ್ಕೆ ಮತ್ತೆ ಅಡಿಪಾಯ ಹಾಕಿದ್ದು ಮುನ್ನಾಭಾಯಿ ಸರಣಿ ಚಿತ್ರಗಳು. ಕನ್ನಡದಲ್ಲಿ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅಧೀರ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಧ್ರುವಾ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+