twitter
    Celebs»Saptha Pavoor»Biography

    ಸಪ್ತಾ ಪವೂರ್ ಜೀವನಚರಿತ್ರೆ

    ಮಂಗಳೂರಿನ ಪಾವೂರು ಗ್ರಾಮದ ಸಪ್ತಾ ಕನ್ನಡ ಚಿತ್ರರಂಗದ ಬಾಲನಟಿ. ತಂದೆ ಸತೀಶ್ ಮತ್ತು ತಾಯಿ ಪವಿತ್ರಾ. ಇವರು ಒಂದನೇ ತರಗತಿ ಓದುವಾಗಲೇ `ಚೆಲ್ಲಾಪಿಲ್ಲಿ' ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ನಂತರ `ರಿಕ್ಷಾ ಡ್ರೈವರ್' ಎಂಬ ತುಳು ಮತ್ತು `ದ್ವೈತ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

    ಸಪ್ತಾ ಪ್ರಸಿದ್ಧಿಯಾಗಿದ್ದು `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಪಲ್ಲವಿ ಪಾತ್ರದ ಮೂಲಕ. ಈ ಚಿತ್ರ ಮಾಡುವಾಗ ಇವರು ಮಂಗಳೂರಿನ ಲೂವರ್ಡ್ ಸ್ಕೂಲ್‌ನಲ್ಲಿ 7ನೇ ತರಗತಿ ಓದುತ್ತಿದ್ದರು.ಡ್ಯಾನ್ಸ್‌ನಲ್ಲಿ ಪ್ರವೀಣೆಯಾಗಿರುವ ಇವರು ರಾಜ್ಯಮಟ್ಟದ ನೃತ್ಯ ಸಮಾರಂಭಗಳಲ್ಲಿ ಭಾಗವಹಿಸಿದ್ದರು.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಅಡಿಷನ್ ಬಗ್ಗೆ ಪತ್ರಿಕೆಯಲ್ಲಿ ನೋಡಿದ ಸಪ್ತಾ ಅಡಿಷನ್‌ಲ್ಲಿ ಭಾಗವಹಿಸಬೇಕೆಂದರೂ ಅಡಿಷನ್ ಕಾಸರಗೋಡುವಿನಲ್ಲಿ ಇದ್ದದ್ದರಿಂದ ಬೇಡವೆಂದೂ ಬಿಟ್ಟಿದ್ದರು. ನಂತರ ತಾಯಿ ಮೂಲಕ ಚಿತ್ರತಂಡದ ಸಂಪರ್ಕಕ್ಕೆ ಬಂದ ಸಪ್ತಾ ಅಡಿಷನ್ ಕೊಟ್ಟರು. ಚಿತ್ರಕ್ಕೆ ಆಯ್ಕೆಯಾದ ಇವರು ಪಲ್ಲವಿ ಪಾತ್ರದಲ್ಲಿ ಮಿಂಚಿದರು.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಪೂರ್ಣ ಪಾತ್ರವರ್ಗ

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X