X
ಹೋಮ್ » ಸೆಲಬ್ರಿಟಿಗಳು » ಸರಿತಾ » ಜೀವನ ಚರಿತ್ರೆ
ಸರಿತಾ
Actress

ಸರಿತಾ ಜೀವನ ಚರಿತ್ರೆ

ಸರಿತಾ ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ಕಂಠದಾನ ಕಲಾವಿದೆ. 1964 ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸದ ಸರಿತಾ ತಮ್ಮ ವಿಶಿ‍ಷ್ಟವಾದ ಅಭಿನಯದಿಂದ ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪನ್ನು ಬೀರಿರುವ ಇವರು ಸಾಕಷ್ಟು ನಟಿಯರಿಗೆ ಕಂಠದಾನ ಕೂಡ ನೀಡಿದ್ದಾರೆ. 1978 ರಲ್ಲಿ ತೆರೆಕಂಡ `ಮರೋ ಚರಿತ್ರ' ಎಂಬ ತೆಲಗು ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ಕನ್ನಡ ಸಿನಿರಂಗಕ್ಕೆ `ಬೆರೆತ ಜೀವ ' ಚಿತ್ರದಿಂದ ಕಾಲಿಟ್ಟರು. ಡಾ. ರಾಜಕುಮಾರ್ ಜೊತೆ ಇವರು `ಕೆರಳಿದ ಸಿಂಹ',`ಹೊಸ ಬೆಳಕು',`ಚಲಿಸುವ ಮೋಡಗಳು'`ಕಾಮನ ಬಿಲ್ಲು',`ಭಕ್ತ ಪ್ರಹ್ಲಾದ' ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. `ಮಲಯ ಮಾರುತ',`ಮೌನ ಗೀತೆ' ಯಂತಹ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ. `ನಗ್ಮಾ' ,`ಸೌಂದರ್ಯ',`ಸಿಮ್ರನ್',`ರಮ್ಯಕೃಷ್ಣನ್',`ವಿಜಯಶಾಂತಿ',`ತಬು',`ಖುಷ್ಬೂ' ಮುಂತಾದ ನಟಿಮಣಿಯರಿಗೆ ಕಂಠದಾನ ಮಾಡಿದ ಶ್ರೇಯ ಇವರಿಗೆ ಸಲ್ಲಬೇಕು. 6 ಫಿಲ್ಮ್ಸ್ ಫೇರ್ ಪ್ರಶಸ್ತಿ, 6 ನಂದಿ ಪ್ರಶಸ್ತಿ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಅತ್ತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಸ್ತುತ ದುಬೈನಲ್ಲಿ ವೈದ್ಯನಾಗಿರುವ ತಮ್ಮ ಪುತ್ರ ಶ್ರವಣ ಜೊತೆ ವಾಸವಾಗಿದ್ದಾರೆ.ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸರಿತಾ ಕನ್ನಡದಲ್ಲಿ ಸುಮಾರು 20 ಚಿತ್ರಗಳಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+