twitter
    Celebs»Shashikumar»Biography

    ಶಶಿಕುಮಾರ್ ಜೀವನಚರಿತ್ರೆ

    ಶಶಿಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ರಾಜಕಾರಣಿ. ಕನ್ನಡ ಮಾತ್ರವಲ್ಲದೇ ಕೆಲ ತಮಿಳು,ತೆಲಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

    ಚಿತ್ರರಂಗ ಪ್ರವೇಶ

    ಶಶಿಕುಮಾರ್ 1988 ರಲ್ಲಿ ತೆರೆಕಂಡ `ಚಿರಂಜೀವಿ ಸುಧಾಕರ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. 1989 ರಲ್ಲಿ ತೆರೆಕಂಡ ರವಿಚಂದ್ರನ್ ಅಭಿನಯದ `ಯುದ್ಧಕಾಂಡ' ಚಿತ್ರ ಇವರಿಗೆ ಹೆಸರು ತಂದು ಕೊಟ್ಟಿತು. ನಂತರ ಬಂದ `ಬಾ ನನ್ನ ಪ್ರೀತಿಸು',ಗಂಧರ್ವ' ಮತ್ತು `ಕೊಲ್ಲೂರು ಕಾಳ' ಚಿತ್ರಗಳು ಯಶಸ್ವಿಯಾಗಲಿಲ್ಲ. 1990 ರಲ್ಲಿ ತೆರೆಕಂಡ ಅಂಬರೀಶ್ ಮತ್ತು ಮಾಲಾಶ್ರೀ ಜೊತೆಯಲ್ಲಿ ನಟಿಸಿದ `ರಾಣಿ ಮಹಾರಾಣಿ' ಚಿತ್ರ ಭರ್ಜರಿ ಪ್ರದರ್ಶನ ಕಂಡಿತು. ಈ ಚಿತ್ರದ ನಂತರ ಹಲವಾರು ಅವಕಾಶಗಳು ಶಶಿಕುಮಾರ್‌ರನ್ನು ಹುಡುಕಿಕೊಂಡು ಬಂದವು. ಶಶಿಕುಮಾರ್ ಆಗಿನ ಟಾಪ್ ನಾಯಕಿರಾದ ಸುಧಾರಾಣಿ,ತಾರಾ,ಶೃತಿ ಮುಂತಾದವರೊಂದಿಗೆ ನಟಿಸಿದರೂ ಶಶಿಕುಮಾರ್ ಮತ್ತು ಮಾಲಾಶ್ರೀ ಜೋಡಿ ವೀಕ್ಚಕರ ಅಚ್ಚುಮೆಚ್ಚಾಗಿತ್ತು. ಕನ್ನಡದ ಜೊತೆ ಹಲವು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.

    ಅಪಘಾತ

    ತಮ್ಮ ಸಿನಿಜೀವನದ ಉತ್ತುಂಗದಲ್ಲಿದ್ದಾಗಲೇ ಬೆಂಗಳೂರು ಟರ್ಫ್ ಕ್ಲಬ್ ಹತ್ತಿರ ಅಪಘಾತಕ್ಕೆ ಒಳಗಾದರು.ಅಪಘಾತದ ಪರಿಣಾಮ ನೆಡೆದ ಸರ್ಜರಿಯಲ್ಲಿ ಇವರ ಮುಖ ಚಹರೆಯು ಭಾಗಶಃ ಬದಲಾಯಿತು. ಅಲ್ಲಿಂದ ಚಿತ್ರಗಳ ಅವಕಾಶವೂ ಕಡಿಮೆಯಾಯಿತು. ನಂತರ ರಾಜಕಾರಣ ಪ್ರವೇಶಿಸಿದ ಇವರು ಚಿತ್ರದುರ್ಗ ಲೋಕಸಭೆಯಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X