twitter
    Celebs»Shilpa»Biography

    ಶಿಲ್ಪಾ ಜೀವನಚರಿತ್ರೆ

    ಕನ್ನಡ,ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟಿ ಶಿಲ್ಪಾರ ಮೂಲ ಹೆಸರು ದಿವ್ಯಾ. 1976 ರಲ್ಲಿ ಕೇರಳದ ತಿರುವನಂತಪುರಂದಲ್ಲಿ ಜನಿಸಿದ ಇವರು ವಿಧ್ಯಾಭ್ಯಾಸ ಮುಗಿಸಿದ್ದು ನಿರ್ಮಲಾ ಭವನದಲ್ಲಿ  .

    1993 ರಿಂದ ಸುಮಾರು ಹತ್ತು ವರ್ಷಗಳ ಕಾಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.ಮಲಯಾಳಂ ಚಿತ್ರರಂಗದಲ್ಲಿ ಇವರನ್ನು `ಚಿಪ್ಪಿ' ಎಂದೇ ಕರೆಯುತ್ತಾರೆ. ಕೆಲ ಮಲಯಾಳಂ ಚಿತ್ರಗಳಲ್ಲಿ ನಾಯಕಿಯಾಗಿ ಮತ್ತು ಪೋಷಕನಟಿಯಾಗಿ ನಟಿಸುತ್ತಿರುವಾಗಲೇ 1996 ರಲ್ಲಿ ತೆರೆಕಂಡ ಶಿವಣ್ಣ ಅಭಿನಯದ ಬ್ಲಾಕ್‌ಬ್ಲಸ್ಟರ್ ಚಿತ್ರ `ಜನುಮದ ಜೋಡಿ' ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು.ಈ ಚಿತ್ರದಲ್ಲಿ ಮುಗ್ಧ ಪ್ರೇಮಿಯಾಗಿ , ದಗ್ಧ ವಿರಹಿಯಾಗಿ ಮನೋಘ್ನವಾಗಿ ಅಭಿನಯಿಸಿದರು. ಈ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರದ `ಅತ್ತ್ಯುತ್ತಮ ನಟಿ' ಪ್ರಶಸ್ತಿ ಕೂಡ ಪಡೆಯಿತು.

    ನಂತರ `ಮುಂಗಾರಿನ ಮಿಂಚು',`ಕಲ್ಯಾಣಿ,ಪ್ರೇಮಾಚಾರಿ'`ಖಡ್ಗ',`ಧರ್ಮ ದೇವತೆ' ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆಯನ್ನು ಮೆರೆದರು.

    2001 ರಲ್ಲಿ ಎಮ್.ರಂಜಿತ್ ಎಂಬುವವರನ್ನು ಮದುವೆಯಾದ ಇವರು ಚಿತ್ರರಂಗದಿಂದ ದೂರವಾದರು. ಈ ದಂಪತಿಗೆ ಅವಂತಿಕಾ ಎಂಬ ಪುತ್ರಿ ಕೂಡ ಇದ್ದಾಳೆ.

    ಮದವೆಯ ನಂತರ ಸೀರಿಯಲ್‌ಗಳಲ್ಲಿ ನಟಿಸಲು ಆರಂಭಿಸಿದ ಶಿಲ್ಪಾ ಕೆಲಕಾಲದ ನಂತರ ತಮ್ಮದೇ ಪ್ರೊಡಕ್ಷನ್ಸ್ ಕಂಪನಿ `ಅವಂತಿಕಾ ಕ್ರೀಯೇಶನ್' ಪ್ರಾರಂಭಿಸಿ ಪತಿಯೊಂದಿಗೆ ಸೀರಿಯಲ್‌ಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X