X
ಶಿಲ್ಪಾ

ಶಿಲ್ಪಾ

Actress
ಜೀವನ ಚರಿತ್ರೆ :  ಕನ್ನಡ,ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟಿ ಶಿಲ್ಪಾರ ಮೂಲ ಹೆಸರು ದಿವ್ಯಾ. 1976 ರಲ್ಲಿ ಕೇರಳದ ತಿರುವನಂತಪುರಂದಲ್ಲಿ ಜನಿಸಿದ ಇವರು ವಿಧ್ಯಾಭ್ಯಾಸ ಮುಗಿಸಿದ್ದು ನಿರ್ಮಲಾ ಭವನದಲ್ಲಿ  . 1993 ರಿಂದ ಸುಮಾರು ಹತ್ತು ವರ್ಷಗಳ ಕಾಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.ಮಲಯಾಳಂ ಚಿತ್ರರಂಗದಲ್ಲಿ ಇವರನ್ನು `ಚಿಪ್ಪಿ' ಎಂದೇ ಕರೆಯುತ್ತಾರೆ. ಕೆಲ ಮಲಯಾಳಂ ಚಿತ್ರಗಳಲ್ಲಿ ನಾಯಕಿಯಾಗಿ ಮತ್ತು ಪೋಷಕನಟಿಯಾಗಿ ನಟಿಸುತ್ತಿರುವಾಗಲೇ 1996 ರಲ್ಲಿ ತೆರೆಕಂಡ ಶಿವಣ್ಣ ಅಭಿನಯದ ಬ್ಲಾಕ್‌ಬ್ಲಸ್ಟರ್ ಚಿತ್ರ `ಜನುಮದ ಜೋಡಿ' ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು.ಈ ಚಿತ್ರದಲ್ಲಿ ಮುಗ್ಧ ಪ್ರೇಮಿಯಾಗಿ , ದಗ್ಧ ವಿರಹಿಯಾಗಿ ಮನೋಘ್ನವಾಗಿ ಅಭಿನಯಿಸಿದರು. ಈ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರದ `ಅತ್ತ್ಯುತ್ತಮ ನಟಿ' ಪ್ರಶಸ್ತಿ ಕೂಡ ಪಡೆಯಿತು. ನಂತರ `ಮುಂಗಾರಿನ ಮಿಂಚು',`ಕಲ್ಯಾಣಿ,ಪ್ರೇಮಾಚಾರಿ'`ಖಡ್ಗ',`ಧರ್ಮ ದೇವತೆ' ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆಯನ್ನು ಮೆರೆದರು. 2001 ರಲ್ಲಿ ಎಮ್.ರಂಜಿತ್ ಎಂಬುವವರನ್ನು ಮದುವೆಯಾದ ಇವರು ಚಿತ್ರರಂಗದಿಂದ ದೂರವಾದರು. ಈ ದಂಪತಿಗೆ ಅವಂತಿಕಾ ಎಂಬ ಪುತ್ರಿ ಕೂಡ ಇದ್ದಾಳೆ. ಮದವೆಯ ನಂತರ ಸೀರಿಯಲ್‌ಗಳಲ್ಲಿ ನಟಿಸಲು ಆರಂಭಿಸಿದ ಶಿಲ್ಪಾ ಕೆಲಕಾಲದ ನಂತರ ತಮ್ಮದೇ ಪ್ರೊಡಕ್ಷನ್ಸ್ ಕಂಪನಿ `ಅವಂತಿಕಾ ಕ್ರೀಯೇಶನ್' ಪ್ರಾರಂಭಿಸಿ ಪತಿಯೊಂದಿಗೆ ಸೀರಿಯಲ್‌ಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ.
ಮುಂದೆ ಓದಿ

ಶಿಲ್ಪಾ ಚಲಚಿತ್ರಗಳು

ಶಿಲ್ಪಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶಿಲ್ಪಾ

ಹೆಸರು ಶಿಲ್ಪಾ
ಹುಟ್ಟಿದ ದಿನ 01 Jun 1976
ವಯಸ್ಸು 50
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶಿಲ್ಪಾ ಆಸ್ತಿ

ಆಸ್ತಿ

ಶಿಲ್ಪಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+