ಬೆಂಗಳೂರಿನಲ್ಲಿ ನೆಲೆಸಿರುವ ಶ್ರದ್ಧಾ ಶ್ರೀನಾಥ್ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಮುಖ ನಟಿ. ಇವರ ತಂದೆ ಮಿಲಿಟರಿ ಆಫೀಸರ್ ಆದ ಕಾರಣ ಇವರು ಜಮ್ಮು ಕಾಶ್ಮೀರದ ಕಮಾಂಡೋ ಆಸ್ಪತ್ರೆಯಲ್ಲಿ ಜನಿಸಿದರು.
ಲಾ ಪದವಿ ಪಡೆದು ವೃತ್ತಿಯಲ್ಲಿ ತೊಡಗಿದ ಇವರು ಆಗಾಗ ಕೆಲವೊಂದು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮಲಯಾಳಂನ `ಕೊಹಿನೂರ್' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ಈ ಮೂಗುತಿ ಸುಂದರಿಗೆ ಬಿಗ್ ಬ್ರೇಕ್ ಕೊಟ್ಟಿದ್ದು ಪವನಕುಮಾರ್ ನಿರ್ದೇಶನದ ಕನ್ನಡದ `ಯು ಟರ್ನ' ಚಿತ್ರ. ಈ ಚಿತ್ರದಲ್ಲಿನ ಅಭಿನಯಕ್ಕಾಗಿ `ಫಿಲ್ಮ್ ಫೇರ್' ಮತ್ತು `ಸೈಮಾ' ಪ್ರಶಸ್ತಿ ಪಡೆದರು.
ಪ್ರಸ್ತುತ ತಮಿಳು ,ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿಯೂ ಸಕ್ರಿಯವಾಗಿದ್ದಾರೆ.