ಶ್ರೀ ಮಹಾದೇವ್ ಕನ್ನಡ ಚಿತ್ರರಂಗದ ಯುವನಟ. ಬೆಂಗಳೂರಿನ ನ್ಯೂ ಕೆಂಬ್ರಿಡ್ಜ್ ಹೈಸ್ಕೂಲ್‌ನಲ್ಲಿ ವಿಧ್ಯಾಭ್ಯಾಸ ಮುಗಿಸಿದ ಇವರು, ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್. ಅಪ್ಲಿಕೇಶನ್ ಡೆವೆಲಪರ್ ಆಗಿ ಕೆಲ ಕಾಲ ಕೆಲಸ ಮಾಡಿದ್ದಾರೆ.
ಕಿರುತೆರೆ
ಶ್ರೀ ಮಹಾದೇವ್ 2014ರಲ್ಲಿ ಈಟಿವಿ ಕನ್ನಡದಲ್ಲಿ ಪ್ರಸಾರವಾದ 'ಚಿಟ್ಟೆ ಹೆಜ್ಜೆ' ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ಶ್ರೀರಸ್ತು ಶುಭಮಸ್ತು ಹಾಗೂ ನೀಲಿ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಈ ಎರಡು ಸೀರಿಯಲ್‌ಗಳು ಅವರಿಗೆ ಅಪಾರ ಜನಪಗ್ರಿಯತೆ ತಂದುಕೊಟ್ಟವು. ನಂತರ ತಮಿಳು ಧಾರಾವಾಹಿಯಲ್ಲಿ ನಟಿಸಿದರು. ಮತ್ತೆ ಕನ್ನಡಕ್ಕೆ ಬಂದ ಅವರು ಇಷ್ಟದೇವತೆ, ಕನ್ಯಾಕುಮಾರಿ ಸೀರಿಯಲ್‌ಗಳಲ್ಲಿ ಅಭಿನಯಿಸಿದರು.
ಸಿನಿಮಾ
2018ರಲ್ಲಿ ನಟಿ ರಚಿತಾ ರಾಮ್ ನಿರ್ಮಾಣದಲ್ಲಿ ಮೂಡಿಬಂ `ರಿಷಭಪ್ರಿಯ' ಕಿರುಚಿತ್ರದಲ್ಲಿ ನಾಯಕನಾಗಿ ನಟಿಸಿದರು. ಈ ಕಿರುಚಿತ್ರಕ್ಕೆ ಪ್ರೇಕ್ಷಕ ಮತ್ತು ವಿಮರ್ಶಕರಿಂದ ಮೆಚ್ಚುಗೆಯಲ್ಲದೇ, ಸೈಮಾ (ಕಿರುಚಿತ್ರ ವಿಭಾಗ) ಅತ್ತ್ಯುತ್ತಮ ನಟ ಪ್ರಶಸ್ತಿ ಕೂಡ ಪಡೆದರು. 2018ರಲ್ಲಿ ತೆರೆಕಂಡ `ಇರುವುದೆಲ್ಲವ ಬಿಟ್ಟು' ಚಿತ್ರದಿಂದ ಶ್ರೀ ಮಹಾದೇವ್ ಫೂರ್ಣ ಪ್ರಮಾಣದ ನಾಯಕನಾಗಿ ಸಿನಿಪಯಣ ಆರಂಭಿಸಿದರು. ಆನಂತರ ಗಜಾನನ ಆಂಡ್ ಗ್ಯಾಂಗ್, ಹೊಂದಿಸಿ ಬರೆಯಿರಿ, ಜಸ್ಟ್ ಪಾಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ.