ಸಿಂಪಲ್ ಸುನ್ನಿ (ಸುನೀಲ್ ಕುಮಾರ್) ಇವರು ಜನಿಸಿದ್ದು 1986 ಅಕ್ಟೋಬರ್ 14 ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ. ತಂದೆ ನರಸಿಂಹ ತಾಯಿ ವಿಜಯಲಕ್ಷ್ಮೀ. ಇವರು ಬೆಂಗಳೂರಿನ ಕೆ ಎಲ್ ಇ ಕಾಲೇಜ್ ನಲ್ಲಿ ಬಯೋಟೆಕ್ನಾಲೋಜಿ ಪದವಿಯನ್ನು ಪಡೆದುಕೊಂಡಿದ್ದಾರೆ.
ಸುನೀಲ್ ಕುಮಾರ್ ಅವರು ಸಿಂಪಲ್ ಸುನಿ ಜನಪ್ರಿಯರಾಗಿರುವ ಇವರು ಭಾರತೀಯ ಚಲನಚಿತ್ರ ನಿರ್ದೇಶಕ, ಗೀತಕಾರಕ ಮತ್ತು ಚಿತ್ರ ಕಥೆಗಾರರಾಗಿ ಕನ್ನಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
"ಜನುಮದ ಗೆಳತಿ" ಚಿತ್ರದ ನಿರ್ದೇಶಕ ದಿನೇಶ್ ಬಾಬು ಅವರ ಸಹಾಯಕ ನಿರ್ದೇಶಕರಾಗಿ ಇವರು ಕೆಲಸ ಮಾಡುವ ಮೂಲಕ ತಮ್ಮ ಚಿತ್ರರಂಗದ ವೃತ್ತಿಯನ್ನು ಪ್ರಾರಂಭಿಸಿದರು. 2013 ರಲ್ಲಿ "ಸಿಂಪಲ್ಲಾಗೊಂದು ಲವ್ ಸ್ಟೋರಿ" ಚಿತ್ರಕ್ಕೆ ಅಕ್ಷನ್ ಕಟ್ ಹೇಳಿದ ಮೊದಲ ಚಿತ್ರ ಇವರದಾಗಿದೆ.