twitter
    Celebs»Siri Ravikumar»Biography

    ಸಿರಿ ರವಿಕುಮಾರ್ ಜೀವನಚರಿತ್ರೆ

    ಸಿರಿ ರವಿಕುಮಾರ್ ಕನ್ನಡದ ಪ್ರಸಿದ್ದ ಆರ್​ಜೆ, ನಟಿ ಹಾಗೂ ರೂಪದರ್ಶಿ. 1997ರ ಅಕ್ಟೋಬರ್ 14ರಂದು ಬೆಂಗಳೂರಿನಲ್ಲಿ ಜನಿಸಿದ ಇವರ ಪೂರ್ಣ ಹೆಸರು ರಮ್ಯಾ ಸಿರಿ ರವಿಕುಮಾರ್.  ಸಿರಿ ಎಂಬುದು ಅವರ ಅಡ್ಡಹೆಸರು. ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಪದವಿ ಪಡೆದಿರುವ ಇವರು, ಶಾಸ್ತ್ರೀಯ ನೃತ್ಯ ಪ್ರಕಾರಗಳು ಮತ್ತು ಗಾಯನದಲ್ಲಿ ತರಬೇತಿ ಪಡೆದಿದ್ದಾರೆ. 

    ರೇಡಿಯೋ ಜಾಕಿ ಮತ್ತು ನಿರೂಪಕಿ 

    ಫೇಮಸ್ ರೇಡಿಯೋ ಜಾಕಿ ಮತ್ತು ಸಿನಿಮಾ ರೇಡಿಯೋ ಮಿರ್ಚಿ ಬೆಂಗಳೂರಿನಲ್ಲಿ ಆರ್‌ಜೆ ಸಿರಿ ಎಂದೇ ಗುರುತಿಸಿಕೊಂಡಿದ್ದ ಇವರು, 2014ರಲ್ಲಿ ಮಿಸ್ಟರ್ ಜೋ ಬಿ ಕರ್ವಾಲೋ ಎಂಬ ಹಿಂದಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.  2019ರಲ್ಲಿ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾದ ಕನ್ನಡದ ಕೋಗಿಲೆ ಸೀಸನ್ 2 ನಿರೂಪಣೆ ಮಾಡುವ ಮೂಲಕ ಕ್ನಡಿಗರಿಗೆ ಪರಿಚಯವಾದರು. 

    ಚಿತ್ರರಂಗ

    2019ರಲ್ಲಿ ಕವಲುದಾರಿ ಸಿನಿಮಾದಲ್ಲಿ ಗೀತಾ ಮುತ್ತಣ್ಣನ ಪಾತ್ರ ನಿರ್ವಹಿಸುವ ಮೂಲಕ ಬೆಳ್ಳಿತೆರೆ ಎಂಟ್ರಿಕೊಟ್ಟರು. ನಂತರ ಅದೇ ವರ್ಷದಲ್ಲಿ ರಕ್ಷಿತ್ ಶೆಟ್ಟಿ ನಿರ್ಮಾಣದ 'ಸಕುಟುಂಬ ಸಮೇತ'ದಲ್ಲಿ ಕಾಣಿಸಿಕೊಂಡರು. 2022ರಲ್ಲಿ ಅಂಬರೀಷ್ ಬಿ.ಎಂ ನಿರ್ದೇಶನದ ಹೋಪ್ ಸಿನಿಮಾದಲ್ಲೂ ನಟಿಸಿದರು. ಇದಾದ ಬಳಿಕ 'ಬೈ ಮಿಸ್ಟೇಕ್' ಎಂಬ ವೆಬ್ ಸರಣಿಯಲ್ಲಿ ಮೈತ್ರಿ ಪಾತ್ರದಲ್ಲಿ ನಟಿಸಿದರು. ಈಗ ರಾಜ್ ಬಿ ಶೆಟ್ಟಿ ಅವರ ಸ್ವಾತಿ ಮುತ್ತಿನ ಹನಿಯೇ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X