ಸೋನು ಗೌಡ(ಸೋನು) ಅವರು ಜನಿಸಿದ್ದು 23 ಮಾರ್ಚ್ 1990 ಬೆಂಗಳೂರಿನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮೌಂಟ್ ಕಾರ್ಮೆಲ್ ಶಾಲೆ ಬೆಂಗಳೂರಿನಲ್ಲಿ.
ಇವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾಡುವಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತಂದೆಯ ಮುಖಾಂತರವೇ ಇವರು ಕನ್ನಡ ಚಿತ್ರರಂಗದಲ್ಲಿ ಆಸಕ್ತಿಯನ್ನು ವಹಿಸಲು ಅವಕಾಶ ದೊರೆಯಿತು.
2008 ರಲ್ಲಿ ಬಿಡುಗಡೆಯಾದ ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಪೋಷಕ ಪಾತ್ರ ಮಾಡಲು ಅವಕಾಶ ಸಿಗುತ್ತದೆ. ನಂತರ ಇವರು ಪರಮೇಶಿ ಪಾನ್ ವಾಲ, ಗುಲಾಮ, ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಾರೆ.
2010 ನವೆಂಬರ್ 1 ರಂದು ಇವರಿಗೆ ಮನೋಜ್ ಕುಮಾರ್ ಅವರ ಜೊತೆಯಲ್ಲಿ ವಿವಾಹವಾಗುತ್ತದೆ.ಹೀಗೇ ಇವರು ಕನ್ನಡ, ತೆಲುಗು, ತಮಿಳು,ಮಲಯಾಳಂ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿ ಸೈ ಅನಿಸಿಕೊಂಡಿದ್ದಾರೆ. ಇವರ ಸಹೋದರಿ ನೇಹಾ ಗೌಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ.