ಸಾಹುಕಾರ ಜಾನಕಿ ದಕ್ಷಿಣ ಭಾರತ ಚಿತ್ರರಂಗದ ದಿಗ್ಗಜ ನಟಿ ಮತ್ತು ನಿರ್ಮಾಪಕಿ. ತೆಲುಗಿನ `ಸಾಹುಕಾರ' ಚಿತ್ರದಿಂದ ಸಿನಿಪಯಣಆರಂಭಿಸಿದ ಜಾನಕಿ ಕನ್ನಡ,ತಮಿಳು,ಮಲಯಾಳಂ, ಹಿಂದಿ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗಕ್ಕೂ ಬರುವ ಮುನ್ನ ರೇಡಿಯೋ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದರು. ದಕ್ಷಿಣ ಚಿತ್ರರಂಗದ ದಿಗ್ಗಜರಾದ ಡಾ.ರಾಜಕುಮಾರ್, ಎಂ.ಜಿ.ಆರ್, ಎನ್.ಟಿ.ಆರ್, ನಾಗೇಶ್ವರರಾವ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಮುಂತಾದವರೊಂದಿಗೆ ನಟಿಸಿದ ಕೀರ್ತಿ ಇವರದು. ಇವರ ಮೊಮ್ಮಗಳು ವೈಷ್ಣವಿ ಕೂಡ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.