ಸ್ಪಂದನಾ ಸೋಮಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. 'ನಾನು ನನ್ನ ಕನಸು' ಎಂಬ ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ್ ಇವರು, ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನ 'ನಚ್ಚಾವೆ' ವೆಬ್ ಸೀರೀಸ್ ಹಾಗೂ ಹಿಂದಿಯ ಸುನ್ ಲೆ ನಾ ಎಂಬ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದಾರೆ. ಇವರು ದಿಲ್ ಖುಷ್' ಸಿನಿಮಾ ಮೂಲಕ ಕನ್ನಡ ಬೆಳ್ಳೆತೆರೆ ಕಾಲಿಟ್ಟಿದ್ದು, ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ.