X
ಸೃಜನ್ ಲೋಕೇಶ್
Actor/Producer/Director

ಸೃಜನ್ ಲೋಕೇಶ್ ಜೀವನ ಚರಿತ್ರೆ

ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ನಟ, ನಿರೂಪಕ ಹಾಗೂ ನಿರ್ಮಾಪಕ. ಕನ್ನಡ ಸಿನಿಮಾರಂಗದ ಪ್ರಪ್ರಥಮ ನಾಯಕ ನಟ ಸುಬ್ಬಯ್ಯ ನಾಯ್ಡು ಮೊಮ್ಮಗನಾದ ಇವರು, 1980ರ ಜೂನ್ 28ರಂದು ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸಿದರು. ಇವರ ತಂದೆ ಲೋಕೇಶ್ ಹಾಗೂ ತಾಯಿ ಗಿರಿಜಾ ಲೋಕೇಶ್. ಇವರ ಅಕ್ಕ ಪೂಜಾ ಲೋಕೇಶ್.

ಸಿನಿಮಾರಂಗ
ಕಲಾವಿದರ ಕುಟುಂಬದಲ್ಲಿ ಜನಿಸಿದ ಸೃಜನ್ ಲೋಕೇಶ್, 1991ರಲ್ಲಿ ತೆರೆಕಂಡ ವೀರಪ್ಪನ ಸಿನಿಮಾದಲ್ಲಿ ಬಾಲನಟನಾಗಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದರು. ಆನಂತರ ಮೂರು ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದರು. ನೀಲ ಮೇಘ ಶ್ಯಾಮ ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿಕೊಟ್ಟ ಸೃಜನ್, ನಾಯಕನಾಗಿ ನಟಿಸುತ್ತಲೇ ನವಗ್ರಹ, ಚಿಂಗಾರಿ, ಎದೆಗಾರಿಕೆ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. 

ನಟರಾಗಿ ಒಟ್ಟು 15ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು, 7 ಕನ್ನಡ ಧಾರಾವಾಹಿ ಹಾಗೂ 2 ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ 'ಮಜಾ ವಿತ್ ಸೃಜ' ಮತ್ತು 'ಮಜಾ ಟಾಕೀಸ್' ಕಾರ್ಯಕ್ರಮಗಳಿಂದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದಲ್ಲದೆ, ರೇಡಿಯೋ ಚಾನೆಲ್‌ಗಳ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದಾರೆ.

10 ಯಶಸ್ವಿ ಶೋಗಳು... 
ಒಟ್ಟು 10 ಯಶಸ್ವಿ ಟಿವಿ ಶೋಗಳಲ್ಲಿ ಆಂಕರಿಂಗ್ ಮಾಡಿ ಕರ್ನಾಟಕದ ಮನೆಮಾತಾಗಿರುವ ಸೃಜನ್, 2012-2013ರಲ್ಲಿ 'ಮಾಧ್ಯಮ ಅವಾರ್ಡ್' ಹಾಗೂ 2012ರಿಂದ ಇಲ್ಲಿಯವರೆಗೆ ಸತತವಾಗಿ ಎಲ್ಲಾ ವಾಹಿನಿಗಳಿಂದ 'ಬೆಸ್ಟ್ ಆಂಕರ್ ಅವಾರ್ಡ್' ಪಡೆದಿದ್ದಾರೆ. 

ಬಿಗ್‌ಬಾಸ್
ಸೃಜನ್ ಲೋಕೇಶ್ ಅವರು ಬಿಗ್‌ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು. ಈ ಕಾರ್ಯಕ್ರಮದ ವಿನ್ನರ್ ಅಕುಲ್ ಬಾಲಾಜಿ ಅಗಿದ್ದರೆ,  ಸೃಜನ್ ಮೊದಲ ರನ್ನರ್ ಅಪ್ ಆದರು. ಬಿಗ್‌ಬಾಸ್ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. 

ಪ್ರೊಡಕ್ಷನ್
2013ರಲ್ಲಿ ಸೃಜನ್ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ 'ಲೋಕೇಶ್ ಪ್ರೊಡಕ್ಷನ್ಸ್' ಆರಂಭಿಸಿದರು. ಇದರ ಮೂಲಕ ಮಜಾ ಟಾಕೀಸ್ ಸೇರಿದಂತೆ ಹಲವು ಯಶಸ್ವಿ ಶೋಗಳನ್ನು ನಿರ್ಮಾಣ ಮಾಡಿದ್ದಾರೆ. 

ಮದುವೆ: 2010ರಲ್ಲಿ ಕಿರುತೆರೆ ನಟಿ ಗ್ರೀಷ್ಮಾ ಅವರನ್ನು ಮದುವೆಯಾದ ಸೃಜನ್‌ ಲೋಕೇಶ್ ಅವರಿಗೆ ಸುಕೃತ್ ಎಂಬ ಮಗನಿದ್ದಾನೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+