ಸುಚೇಂದ್ರ ಪ್ರಸಾದ್ ಕನ್ನಡ ಚಿತ್ರರಂಗದ ಅದ್ಬುತ ಕಲಾವಿದ. ಇವರು ಒದಿದ್ದು MA.LLB. ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿದ್ದ ಇವರು ಚಿತ್ರಗಳಲ್ಲಿ ,ಕಿತುತೆರೆಯಲ್ಲಿ ನಿರ್ದೇಶನ, ನೃತ್ಯ ಸಂಯೋಜನೆ ಮಾಡುವುದರ ಜೊತೆಗೆ ನಾಟಕಗಳನ್ನು ರಚಿಸುತ್ತಿದ್ದರು. 1999 ರಲ್ಲಿ ಕುವೆಂಪುರವರ ಜನಪ್ರಿಯ ಕಾದಂಬರಿ `ಕಾನೂರು ಹೆಗ್ಗಡತಿ' ಚಿತ್ರರೂಪಕ್ಕೆ ಬಂದಾಗ ,ಅದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಸುಚೇಂದ್ರರು ಜನಪ್ರಿಯರಾದರು. ಮುಂದೆ `ಬೇರು',`ತುತ್ತೂರಿ',`ಬೆಟ್ಟದ ಜೀವ'ದಂತಹ ಸಾಕಷ್ಟು ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ ಇವರು ಕನ್ನಡದ ಕಲಾಲೋಕದ ಅದ್ಭುತ ಪ್ರತಿಭೆಯಾಗಿ ಬೆಳೆದರು.
2007 ರಲ್ಲಿ ಕನ್ನಡದ ಖ್ಯಾತ ಕಲಾವಿದೆ `ಪವಿತ್ರಾ ಲೋಕೇಶ್' ಅವರನ್ನು ವಿವಾಹವಾಗಿದ್ದಾರೆ.