X
ಸುದರ್ಶನ್
Actor/Singer

ಸುದರ್ಶನ್ ಜೀವನ ಚರಿತ್ರೆ

ಆರ್.ಎನ್.ಸುದರ್ಶನ್ (ರಟ್ಟೆಹಳ್ಳಿ ನಾಗೇಂದ್ರ) ಕನ್ನಡ ಚಿತ್ರರಂಗದ ಅದ್ಭುತ ನಟ, ಗಾಯಕ ಮತ್ತು ಚಿತ್ರನಿರ್ಮಾಪಕ. ಇವರ ತಂದೆ ಖ್ಯಾತ ನಿರ್ದೇಶಕ ಆರ್.ನಾಗೇಂದ್ರರಾವ್, ಇವರ ಸಹೋದರರಾದ ಆರ್.ಎನ್.ಕೃಷ್ಣಪ್ರಸಾದ (ಖ್ಯಾತ ನಿರ್ದೇಶಕ, ಛಾಯಾಗ್ರಾಹಕ) ಮತ್ತು ಆರ್.ಎನ್.ಜಯಗೋಪಾಲ್ (ಖ್ಯಾತ ಚಿತ್ರಸಾಹಿತಿ) ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. 1961 ರಲ್ಲಿ ಇವರ ತಂದೆಯವರ ನಿರ್ದೇಶನದಲ್ಲಿ ಮೂಡಿಬಂದ `ವಿಜಯನಗರದ ವೀರಪುತ್ರ' ಚಿತ್ರದಲ್ಲಿ ನಾಯಕನಟನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲ ತೆಲುಗು,ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಮಿಂಚಿದ್ದಾರೆ. ನಾಯಕನಟನಾಗಿ ಶುರುವಾದ ಸಿನಿಪಯಣದಲ್ಲಿ ಖಳನಾಯಕ, ಪೋ‍ಷಕನಟನ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಕನ್ನಡ ಕಿರುತೆರೆಯಲ್ಲಿಯೂ ತಮ್ಮ ಅಭಿನಯವನ್ನು ಮೆರೆದಿದ್ದ ಈ ಚೇತನ 2017 ಸೆಪ್ಟೆಂಬರ್ ನಲ್ಲಿ ವಿಧಿವಶವಾಯಿತು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+