CelebsbredcrumbSudeepbredcrumbBiography

  ಸುದೀಪ್ ಜೀವನಚರಿತ್ರೆ

  'ಕಿಚ್ಚ' ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹು ಮುಖ ಹಾಗೂ ಬಹು ಭಾಷಾ ಪ್ರತಿಭೆ. ಇವರು ಸಂಜೀವ್ ಮಂಜಪ್ಪ ಮತ್ತು ಸರೋಜಾ ದಂಪತಿಗಳ ಮಗನಾಗಿ 2 ಸೆಪ್ಟೆಂಬರ್ 1973 ರಲ್ಲಿ ಜನಿಸಿದರು. ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುದೀಪ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ.

  ಅಂಡರ್ 17 ಹಾಗೂ ಅಂಡರ್ 19 ಕ್ರಿಕೆಟ್ ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ ಸುದೀಪ್ ಗೆ ನಟನೆ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ಮುಂಬೈನ ರೋಶನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಗೆ ಸೇರಿಕೊಂಡು ತರಬೇತಿ ಪಡೆದರು.

  ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಮೂಲಕ ಕಿರುತೆರೆಗೆ ಸುದೀಪ್ ಪದಾರ್ಪಣೆ ಮಾಡಿದರು. 'ತಾಯವ್ವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸುದೀಪ್ ಪ್ರವೇಶಿಸಿದರು. ತದನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸ್ಪರ್ಶ(1999) ಚಿತ್ರಕ್ಕಾಗಿ ಬಣ್ಣ ಹಚ್ಚಿದರು. 2001 ರಲ್ಲಿ ತೆರೆಗೆ ಬಂದ 'ಹುಚ್ಚ' ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು

  ಸುದೀಪ್ ಕೇವಲ ನಟ ಮಾತ್ರ ಅಲ್ಲ. ಪ್ರತಿಭಾವಂತ ನಿರ್ದೇಶಕ ಕೂಡ. ಇವರು ನಿರ್ದೇಶಿಸಿದ 'ಮೈ ಆಟೋಗ್ರಾಫ್', 'ವೀರ ಮದಕರಿ', 'ಕೆಂಪೇಗೌಡ', 'ಮಾಣಿಕ್ಯ' ಚಿತ್ರಗಳು ಭರ್ಜರಿ ಪ್ರದರ್ಶನಗೊಂಡಿವೆ.


  ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲಿಯೂ ಮಿಂಚಿದ್ದಾರೆ ಕಿಚ್ಚ ಸುದೀಪ್. ಹಿಂದಿಯಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಫೂಂಕ್', ತೆಲುಗಿನ 'ಈಗ', 'ಬಾಹುಬಲಿ' ಹಾಗೂ ತಮಿಳಿನ 'ಪುಲಿ' ಚಿತ್ರಗಳಲ್ಲಿ ಸುದೀಪ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ 'ಬಿಗ್ ಬಾಸ್' ಕಾರ್ಯಕ್ರಮದ ನಿರೂಪಕರಾಗಿಯೂ ಸುದೀಪ್ ಸಕ್ರಿಯರಾಗಿದ್ದಾರೆ. 2001 ರಲ್ಲಿ ಪ್ರಿಯಾ ಅವರನ್ನ ಸುದೀಪ್ ಕೈಹಿಡಿದರು. ಈ ದಂಪತಿಗೆ ಓರ್ವ ಪುತ್ರಿ ಇದ್ದಾಳೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X