ಸುಕುಮಾರ್ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ. ಆಂಧ್ರಪ್ರದೇಶದಲ್ಲಿ ಜನಿಸಿದ ಇವರು ಚಿತ್ರರಂಗಕ್ಕೆ ಬರುವ ಮುನ್ನ ಗಣಿತ ಮತ್ತು ಭೌತಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಬರಹಗಾರರಾಗಿ ಚಿತ್ರರಂಗ ಪ್ರವೇಶಿಸಿದ ಇವರು 2004 ರಲ್ಲಿ ತೆರೆಕಂಡ `ಆರ್ಯ' ಚಿತ್ರದಿಂದ ನಿರ್ದೇಶಕರಾಗಿ ಸಿನಿ ಜೀವನ ಆರಂಭಿಸಿದರು.
ಜಗದಂ, ಆರ್ಯ 2, 100 % ಲವ್, ನನ್ನಕು ಪ್ರೇಮತೋ, ರಂಗಸ್ಥಳ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.