ಸುಂದರಕೃಷ್ಣ ಅರಸ್ ಕನ್ನಡ ಚಿತ್ರರಂಗದ ಪ್ರಖ್ಯಾತ ಖಳನಟ, ನಿರ್ದೇಶಕ ಮತ್ತು ನಿರ್ಮಾಪಕ. ಹಲವು ಕಲಾವಿದರಿಗೆ ಕಂಠದಾನ ಕೂಡ ಮಾಡಿದ್ದಾರೆ. ಇವರು ಗಿರೀಶ್ ಕಾರ್ನಾಡ್ ರ `ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಖ್ಯಾತಿ ಪಡೆದರು. ಈ ಚಿತ್ರದ ನಟನೆಗಾಗಿ ಕರ್ನಾಟಕ ರಾಜ್ಯ ಅತ್ತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೂಡ ಪಡೆದಿದ್ದಾರೆ.
ಸುಮಾರು ಇನ್ನೂರು ಚಿತ್ರಗಳಲ್ಲಿ ನಟಿಸಿರುವ ಇವರು ಕೆಲವು ಚಿತ್ರಗಳನ್ನು ನಿರ್ದೇಶಿಸಿ ನಿರ್ದೇಶಿಸಿದ್ದಾರೆ.ಹುಲಿ ಹೆಬ್ಬುಲಿ, ಸೀತಾರಾಮು, ಇಬ್ಬನಿ ಕರಗಿತು. ಗಂಡ ಭೇರುಂಡ ಮುಂತಾದ ಚಿತ್ರಗಳಲ್ಲಿ ಮನೋಘ್ನ ಅಭಿನಯ ನೀಡಿದ್ದಾರೆ. ಇವರ ಪುತ್ರ ಕೂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.