ಸುನಿಧಿ ಚೌಹಾಣ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ಹಿನ್ನಲೆ ಗಾಯಕಿ .ಪ್ರಮುಖವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕೆಲ ಕನ್ನಡ, ತೆಲಗು,ತಮಿಳು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ.
ಮೂಲತಃ ಗುಜರಾತಿ ಕುಟುಂಬದ ಇವರು ದೆಹಲಿಯಲ್ಲಿ ಜನಿಸಿದರು. ಗ್ರೀನ್‌ವೆ ಪಬ್ಲಿಕ್ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದ ಸುನಿಧಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿಯಿತ್ತು.ಹಲವು ಸ್ಫರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕನ್ನಡದಲ್ಲಿ `ಆರ್ಯನ್',`ಪೃಥ್ವಿ',`ಹುಡುಗ ಹುಡುಗಿ',`ಈ ಬಂಧನ' ಮುಂತಾದ ಚಿತ್ರಗೀತೆಗಳಿಗೆ ಧ್ವನಿಯಾಗಿದ್ದಾರೆ.