X
ಸನ್ನಿ ಲಿಯೋನ್
Actress

ಸನ್ನಿ ಲಿಯೋನ್ ಜೀವನ ಚರಿತ್ರೆ

ಸನ್ನಿ ಲಿಯೋನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ .ಚಿತ್ರರಂಗಕ್ಕೂ ಬರುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿಯಾಗದ್ದರು. ಅಮೇರಿಕಾದಲ್ಲಿ ನೆಲಿಸಿದ್ದ ಇವರನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದು ಹಿಂದಿ ಬಿಗ್ ಬಾಸ್ ಅವತರಿಣಿಕೆ.

1981,ಮೇ 13ರಂದು ಕೆನೆಡಾದ ಸರ್ನಿಯಾದಲ್ಲಿ ಜನಿಸಿದರು. ಬಾಲ್ಯದ ಹೆಸರು ಕರೇನಜಿತ್ ಕೌರ್ ವೋಹ್ರಾ .ಚಿಕ್ಕವಯಸ್ಸಿನಿಂದಲೂ ಟಾಮ್ ಬಾಯ್ ಇಮೇಜ್ ಹೊಂದಿದ್ದ ಇವರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ನೀಲಿ ಚಿತ್ರಗಳಲ್ಲಿ ಅಭಿನಯಿಸುವ ಮುಂಚೆ ಒಂದು ಜರ್ಮನ್ ಬೇಕರಿ ಮತ್ತು ಟ್ಯಾಕ್ಸ್ ಫರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

 

ಪೆಂಟ್ ಹೌಸ್ ಮ್ಯಾಗಜೀನ್ ನಲ್ಲಿ ಮೊದಲ ಬಾರಿಗೆ ನಗ್ನಚಿತ್ರ ಶೂಟ್ ಮಾಡುವಾಗ ತನ್ನ ಮೂಲ ಹೆಸರನ್ನು ಮುಚ್ಚಿಟ್ಟು ತನ್ನ ಸಹೋದರನ ಹೆಸರು ಸನ್ನಿ ಯನ್ನು ಬಳಸಿದರು. ಅಲ್ಲಿಂದ ಸನ್ನಿ ಲಿಯೋನ್ ಎಂದೇ ಖ್ಯಾತರಾದರು. 


ನಂತರ ಹಲವು ಮ್ಯಾಗಜೀನ್ ಮತ್ತು ನೀಲಿ ಚಿತ್ರಗಳಲ್ಲಿ ನಟಿಸಿ ತುಂಬಾ ಪ್ರಖ್ಯಾತಿ ಪಡೆದರು. 2009 ರಿಂದ ತಮ್ಮ ಸಂಗಾತಿ ಡೇನಿಯಲ್ ವೇಬರ್ ಜೊತೆ ಸೇರಿ ತಮ್ಮದೇ ಸಂಸ್ಥೆ ಸ್ಥಾಪಿಸಿ ನೀಲಿ ಚಿತ್ರಗಳಲ್ಲಿ ನಟಿಸಿ ನಿರ್ಮಿಸಿತೊಡಗಿದರು. 2012 ರ ಪ್ರಕಾರ ಇವರ ಸನ್ನಿ ಲಿಯೋನ್ ವೆಬಸೈಟ್ ಗೆ ವಿಸಿಟ್ ಮಾಡುವ ಟ್ರಾಫಿಕ್ ನಲ್ಲಿ ಸುಮಾರು 80% ಪ್ರತಿಶತ ಭಾರತೀಯರಿದ್ದರು ಮತ್ತು ಸನ್ನಿಯ 60%ಪ್ರತಿಶತ ಆದಾಯ ಭಾರತದಿಂದಲೇ ಬರುತ್ತಿತ್ತು. ಆ್ಯಪಲ್ ಐಪೋನ್ ನಲ್ಲಿ ಮೊದಲ ಬಾರಿ ತನ್ನ ಸ್ವಂತಃ ಅಪ್ಲಿಕೇಶನ್ ಸೃಷ್ಟಿಸಿದ ಪ್ರಫಥಮ ನೀಲಿ ತಾರೆ ಸನ್ನಿ ಲಿಯೋನ್.


ಅಮೇರಿಕಾದ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಸನ್ನಿ 2011 ರಲ್ಲಿ ಹಿಂದಿಯ ಬಿಗ್ ಬಾಸ್ 5 ನೇ ಸೀಸನ್ ನಲ್ಲಿ ಭಾಗವಹಿಸಿದರು. ಇದು ಭಾರತದಲ್ಲಿ ಹಲವಾರು ವಿವಾದಗಳಿಗೆ ಎಡೆ ಮಾಡಿಕೊಟ್ಟಿತು. ನಂತರ ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಭಟ್ ಇವರನ್ನು ಭೇಟಿ ಮಾಡಿ ತಮ್ಮ ಜಿಸ್ಮ್ 2 ಚಿತ್ರದಲ್ಲಿ ನಟಿಸಿಲು ಕೇಳಿಕೊಂಡರು. ಅಲ್ಲಿಂದ ಸನ್ನಿ ಲಿಯೋನ್ ಹಿಂದಿ ಚಿತ್ರರಂಗದಲ್ಲಿ ಮಿಂಚತೊಡಗಿದರು.


ನಂತರ ರಾಗಿಣಿ ಎಂ.ಎಂ.ಎಸ್ 2, ಜಾಕಪಾಟ್ ಮುಂತಾದ ಚಿತ್ರಗಳಲ್ಲಿ ನಟಿಸಿದ ಸನ್ನಿ ಲಿಯೋನ್ ದಕ್ಷಿಣ ಚಿತ್ರರಂಗಕ್ಕೂ ಬಂದರು. ಕನ್ನಡದಲ್ಲಿ ಪ್ರೇಮ್ ನಿರ್ದೆಶನದ `ಡಿಕೆ' ಚಿತ್ರದಲ್ಲಿ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದರು. 2013 ರಿಂದ ನೀಲಿ ಚಿತ್ರಗಳಿಗೆ ವಿದಾಯ ಹೇಳಿದ ಸನ್ನಿ ಪ್ರಸ್ತುತ ಬಾಲಿವುಡ್ ಚಿತ್ರರಂಗದ ಬಹುಬೇಡಿಕೆಯ ನಟಿ.


2016 ರಲ್ಲಿ `ಸ್ವೀಟ್ ಡ್ರೀಮ್ಸ್ ' ಎಂಬ ಪುಸ್ತಕ ಬರೆದರು. ಇದು ಹಲವು ಪ್ರೇಮಕಥೆಗಳ ಗುಚ್ಚವಾಗಿತ್ತು.2018 ತಮ್ಮ ಜೀವನಾಧಾರಿತ ವೆಬ್ ಸೀರೀಸ್ `ಕರೇನಜಿತ್ ಕೌರ್- ದಿ ಅನಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ಎಂಬ ವೆಬ್ ಸೀರಿಸ್ ಮಾಡಿದರು. ತನ್ನ ವಿವಾದಾತ್ಮಕ ಹಿನ್ನಲೆ ಬಗ್ಗೆ ಒಂಚೂರು ಬೇಸರ ಪಡಿಸಿದ ಸನ್ನಿ ತನ್ನ ಪತಿಯೊಂದಿಗೆ ಭಾರತದಲ್ಲಿ ನೆಲಿಸಿ, ಇಲ್ಲಿನ ಚಿತ್ರರಂಗದಲ್ಲಿ ಸಕ್ರಿಯವಾಗಿ, ಹಲವು ಸಮಾಜಸೇವೆಗಳಲ್ಲಿ ಕೂಡ ತೊಡಗಿಕೊಂಡಿದ್ದಾರೆ . ಮುಂಬೈನ ಒಂದು ಶಾಲೆಯನ್ನು ದತ್ತು ತೆಗೆದುಕೊಂಡಿರುವ ಸನ್ನಿ ಪ್ರಾಣಿ ದಯಾ ಸಂಸ್ಥೆ ಪೇಟಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+