ಸುರೇಶ್ ಮಂಗಳೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಪೋಷಕ ನಟ. ವಿನು ಬಳೆಂಜರವರ `ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಮೂಲಕ ಮುನ್ನಲೆಗೆ ಬಂದರು. `ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಇವರು ನಂತರ `ತಾಜಮಹಲ್', `ಚಾರಮಿನಾರ್',`ಮೈಲಾರಿ',`ಮಿಲನ' ಮುಂತಾದ ಚಿತ್ರಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಕೆಲವು ತುಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಇವರು 2016,ಮೇ 17 ರಂದು ಕಿಡ್ನಿ ವೈಪಲ್ಯದಿಂದ ನಿಧನರಾದರು.