ಸುಷ್ಮಿತಾ ಗೌಡ ಕಿರುತೆರೆ ನಟಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಈ ನಟಿ, ಹತ್ತನೇ ಕ್ಲಾಸ್ ಹಾಗೂ ಪಿಯುಸಿಯನ್ನು ಜಸ್ಟ್ ಪಾಸ್ ಮಾಡಿದ್ದರು. ನಂತರ ಬಿಕಾಂ ತೆಗೆದುಕೊಂಡಿದ್ದ ಅವರು, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಡಿಗ್ರಿ ಪೂರ್ಣಗೊಳಿಸದಿದ್ದರೂ ಕಂಪನಿಯೊಂದರಲ್ಲಿ 8 ತಿಂಗಳುಗಳ ಕೆಲಸ ಮಾಡಿದ ಇವರು, ನಂತರ ರಾಜಕೀಯಕ್ಕೆ ಸಂಬಂಧಪಟ್ಟ ಅಭಿಯಾನದಲ್ಲಿ ಭಾಗಿಯಾಗಿದ್ದರು.
ಇದಾದ ಬಳಿಕ ಇವರಿಗೆ ಮಜಾ ಭಾರತ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಇಲ್ಲಿ ಇವರ ನಟನೆಯನ್ನು ಎಲ್ಲರು ಮೆಚ್ಚಿಕೊಂಡಿದ್ದರು. ಮಜಾ ಭಾರತದಿಂದ ಸಾಕಷ್ಟು ಖ್ಯಾತಿ ಗಳಿಸಿರುವ ಇವರು, ಹಲವಾರು ಕಿರುತ್ರಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.