twitter
    Celebs»T S Nagabharana»Biography

    ಟಿ ಎಸ್ ನಾಗಾಭರಣ ಜೀವನಚರಿತ್ರೆ

    ಟಿ.ಎಸ್.ನಾಗಾಭರಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ,ನಿರ್ಮಾಪಕ,ನಟ ಮತ್ತು ರಂಗಕರ್ಮಿ. ಚಿತ್ರರಂಗ, ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ತಮ್ಮ ಅಭಿನಯ ಮತ್ತು ನಿರ್ದೇಶನದಿಂದ ಹೆಸರುವಾಸಿಯಾಗಿದ್ದಾರೆ.
    ಬಾಲ್ಯ-ಶಿಕ್ಷಣ
    ತಲಕಾಡು ಶ್ರೀನಿವಾಸಯ್ಯ ನಾಗಾಭರಣ 1953 ಜನೇವರಿ 23 ರಂದು ಬೆಂಗಳೂರಿನಲ್ಲಿ ಜನಸಿದರು.ಕಾಲೇಜು ದಿನಗಳಿಂದಲೇ ಸಿನಮಾ-ರಂಗಭೂಮಿ ಇವರ ಕನಸಾಗಿತ್ತು. ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವಿ ಹೊಂದಿರುವ ಇವರು ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದಲ್ಲಿ ಅಪಾರ ಅಭಿರುಚಿ ಹೊಂದಿದ್ದಾರೆ.
    ರಂಗಭೂಮಿ
    ಕಾಲೇಜು ದಿನಗಳಲ್ಲಿಯೇ ಹಲವು ನಾಟಕಗಳನ್ನು ನಿರ್ದೇಶಿಸಿದ್ದ ಇವರು ಪ್ರಮುಖ ರಂಗಕರ್ಮಿ ಮತ್ತು ಸಾಹಿತಿಗಳಾದ ಬಿ.ವಿ.ಕಾರಂತ, ಗಿರೀಶ್ ಕಾರ್ನಾಡ್,ಚಂದ್ರಶೇಖರ ಕಂಬಾರ ಮುಂತಾದವರ ಜೊತೆ ಒಡನಾಟ ಹೊಂದಿದ್ದರು. ಖ್ಯಾತ ನಾಟಕ ಸಾಹಿತಿ ಆದ್ಯ ರಂಗಾಚಾರ್ಯರ ಪ್ರಭಾವ ಇವರ ಹಲವು ನಾಟಕಗಳಿಗೆ ಸ್ಫೂರ್ತಿಯಾಯಿತು.ಬೆಂಗಳೂರಿನ ಪ್ರಸಿದ್ಧ ನಾಟಕ ತಂಡ `ಬೆನಕ' ಸ್ಥಾಪಿಸಿದ ಕೀರ್ತೀ ನಾಗಾಭರಣರಿಗೆ ಸಲ್ಲಬೇಕು.ರಂಗಭೂಮಿಯಲ್ಲಿನ ಇವರ ಅಪಾರ ಸೇವೆ ಪರಿಗಣಿಸಿ ಭಾರತ ಸರ್ಕಾರ ಇವರಿಗೆ ಬಂಗಾರದ ಪದಕ ನೀಡಿ ಗೌರವಿಸಿದೆ.ಪ್ರತಿವರ್ಷವೂ ಮಕ್ಕಳಿಗಾಗಿ ಕನಿಷ್ಠ ಮೂರು ನಾಟಕಗಳನ್ನು ನಿರ್ದೇಶಿಸುತ್ತಾರೆ.ಪ್ರತಿವರ್ಷ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಟಕ ಕಾರ್ಯಾಗಾರಗಳನ್ನು ನೆಡೆಸುವ ಇವರು ರಂಗಾಯಣ ಮೈಸೂರು ಮುಂತಾದ ರಂಗತಂಡಗಳ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ.
    ಕಿರುತೆರೆ-ದೂರದರ್ಶನ
    ರಾಷ್ಟ್ರೀಯ ಮತ್ತು ಸ್ಥಳೀಯ ವಾಹಿನಿಗಳಲ್ಲಿ ಸಕ್ರಿಯವಾಗಿದ್ದ ಇವರು ಹಲವಾರು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ದೂರದರ್ಶನದ ಆರಂಭದ ದಿನಗಳಲ್ಲಿ ವಾಹಿನಿಗಾಗಿ ಧಾರಾವಾಹಿಗಳನ್ನು ನಿರ್ದೇಶಿಸಿಸುತ್ತಿದ್ದರು. ತಮ್ಮ `ಶ್ರುತಾಲಯ' ಸಂಸ್ಥೆಯ ಅಡಿಯಲ್ಲಿ ದೂರದರ್ಶನದಲ್ಲಿ ಕರ್ನಾಟಕದ ಹಲವು ಖ್ಯಾತ ಕವಿಗಳ ಮಧುರ ಗಾಯನಗಳನ್ನು ಪ್ರಸ್ತುತ ಪಡಿಸಿದ್ದರು. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರ `ಸಂಸ್ಮರಣ' ಪ್ರವಾಸ ಕಥಾಮಾಲಿಕೆಯನ್ನು ಅಮೇರಿಕಾದಲ್ಲಿ ವಿಸ್ತೃತವಾಗಿ ಚಿತ್ರೀಕರಣ ಮಾಡಿದ್ದರು. `ಆರಾಧನಾ',ತೆನಾಲಿ ರಾಮ',`ಗಾನಯೋಗಿ ಪಂಚಾಕ್ಷರಿ' ಓ ನನ್ನ ಬೆಳಕೇ' ಮಂತಾದವು ಇವರು ನಿರ್ದೇಶಿಸಿದ ಪ್ರಮುಖ ಧಾರಾವಾಹಿಗಳು.
    ಸಿನಿಪ್ರಪಂಚ
    ಸಹಾಯಕ ನಿರ್ದೇಶಕರಾಗಿ ಸಿನರಂಗ ಪ್ರವೇಶಿಸಿದ ಇವರು 1978 ರಲ್ಲಿ ತೆರೆಕಂಡ `ಗ್ರಹಣ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. ಈ ಚಿತ್ರ ಎರಡು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು.`ಬಂಗಾರದ ಜಿಂಕೆ',`ಅನ್ವೇಷನೆ' ಚಿತ್ರಗಳ ನಂತರ ನಿರ್ದೇಶಿಸಿದ `ಬ್ಯಾಂಕರ್ ಮಾರ್ಗಯ್ಯ' ಚಿತ್ರವೂ ಕೂಡ ರಾಷ್ಟ್ರ ಪ್ರಶಸ್ತಿ ಪಡೆಯಿತು. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಸುಮಾರು 20 ಚಿತ್ರಗಳು ಅಂತರಾಷ್ಟ್ರೀಯ,ರಾಷ್ಟೀಯ ಮತ್ತು ರಾಜ್ಯ ಮಟ್ಟಗಳಲ್ಲಿ ಪ್ರಶಸ್ತಿಗಳನ್ನು ಪಡೆದಿವೆ.ಇವರು ಕೆಲಕಾಲ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ವಾಣಿಜ್ಯ ಚಿತ್ರಗಳು ಮತ್ತು ಕಲಾತ್ಮಕ ಚಿತ್ರಗಳ ಕೊಂಡಿಯಾಗಿ ನಾಗಾಭರಣರ ಚಿತ್ರಗಳು ಮೂಡಿಬಂದಿವೆ.
    1983 ರಲ್ಲಿ ತೆರೆಕಂಡ `ಆದಿ ಶಂಕರಾಚಾರ್ಯ' ಚಿತ್ರದ ಮೂಲಕ ನಟನಾಗಿ ಅಭಿನಯ ಆರಂಭಿಸಿದ ಇವರು ಶಂಕರನಾಗ್‌ರ `ಆಕ್ಸಿಡೆಂಟ್' ಚಿತ್ರದಲ್ಲಿ ಮುಗ್ದ ಹಳ್ಳಿ ಹೈದನ ಪಾತ್ರದಲ್ಲಿ ಮನೋಘ್ನವಾಗಿ ನಟಿಸಿದರು. `ಕಿರಾತಕ',`ವಸುಂಧರಾ,`ಜೈಲಲಿತಾ',`ಉಪ್ಪಿನ ಕಾಗದ',`ಕೆ.ಜಿ.ಎಫ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.
    ಇವರ ಪತ್ನಿ ಹೆಸರು ನಾಗಿಣಿ. ಪುತ್ರ ಪನ್ನಾಗಭರಣ ಕೂಡ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ದೇಶಕನಾಗಿ ಸಕ್ರಿಯವಾಗಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X