X
ಟೈಗರ್ ಪ್ರಭಾಕರ್
Actor/Director

ಟೈಗರ್ ಪ್ರಭಾಕರ್ ಜೀವನ ಚರಿತ್ರೆ

ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದ ಧೀಮಂತ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಕನ್ನಡ ಚಿತ್ರಗಳಲ್ಲಿ ಕಂಗ್ಲೀಷ್ ಭಾಷೆಯನ್ನು ಬಳಕೆಗೆ ತಂದ ಶ್ರೇಯ ಪ್ರಭಾಕರ್ ಅವರಿಗೆ ಸಲ್ಲಬೇಕು.ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕೂಡ ತಮ್ಮ ಅಭಿನಯ ಪ್ರೌಢಿಮೆ ಮೆರೆದಿರುವ ಇವರು ಸುಮಾರು 450 ಚಿತ್ರಗಳಲ್ಲಿ ನಟಿಸಿದ್ದಾರೆ.

 

1950 ರಲ್ಲಿ ಬೆಂಗಳೂರಿನ ಪುಲಕೇಶಿ ನಗರದಲ್ಲಿ ಜನಿಸಿದ ಪ್ರಭಾಕರ್ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ಇವರು ನಟಿಸಿದ ಮೊದಲ ಚಿತ್ರ `ಕಾಡಿನ ರಹಸ್ಯ'.ನಂತರ ನಾಯಕನಾಗಿ ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಪ್ರಭಾಕರ್ ನಿರ್ಮಾಪಕರಾಗಿ `ಮಹೇಂದ್ರವರ್ಮ', `ಮಿಸ್ಟರ್ ಮಹೇಶ್ ಕುಮಾರ' ಚಿತ್ರಗಳನ್ನು ನಿರ್ಮಿಸಿದರು. ಇವರೆಡು ಚಿತ್ರಗಳು ಬಾಕ್ಸಾಫೀಸಿನಲ್ಲಿ ಯಶಸ್ವಿಯಾದವು.

80 ಮತ್ತು 90 ರ ದಶಕದಲ್ಲಿ ಎಲ್ಲಾ ಭಾಷೆಗಳಲ್ಲಿ ಬಹು ಬೇಡಿಕೆಯ ನಟನಾಗಿದ್ದರು. ನಿರ್ದೇಶಕರಾಗಿ `ಬಾಂಬೆ ದಾದಾ', `ಕಿಂಗ್',`ಯಮ ಕಿಂಕರ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

 

`ಟೈಗರ್' ಚಿತ್ರದಲ್ಲಿನ ನಟನೆಯಿಂದ ಇವರಿಗೆ ಟೈಗರ್ ಬಿರುದು ಬಂದಿತು. ಸ್ಟಂಟ್ ಮ್ಯಾನ್ ಆಗಿ, ನಾಯಕನಟನಾಗಿ,ಖಳನಾಯಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ಸಂಗೀತ ನಿರ್ದೇಶಕನಾಗಿ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಸಾಧನೆ ಮಾಡಿದ್ದಾರೆ.

 

ಪ್ರಭಾಕರ್ ಗೆ ಮೊದಲ ಪತ್ನಿಯಿಂದ ಭಾರತಿ,ಗೀತಾ ಮತ್ತು ವಿನೋದ್ ಎಂಬ ಮೂರು ಮಕ್ಕಳಿದ್ದರೆ, ಎರಡನೇ ಪತ್ನಿ ನಟಿ ಜಯಮಾಲಾರಿಂದ ಸೌಂದರ್ಯ ಎಂಬ ಪುತ್ರಿಯಿದ್ದಾಳೆ.ಜಯಮಾಲಾರ ಜೊತೆ ವಿಚ್ಚೇದನ ನಂತರ ಮಲಯಾಳಂ ನಟಿ ಅಂಜು ರನ್ನು ವಿವಾಹವಾಗಿದ್ದ ಪ್ರಭಾಕರ್‌ಗೆ ಈ ದಂಪತಿಯಿಂದ `ಅರ್ಜುನ್' ಎಂಬ ಪುತ್ರನಿದ್ದಾನೆ. ಇವರಲ್ಲಿ ವಿನೋದ್ ಪ್ರಭಾಕರ್ ಮತ್ತು ಸೌಂದರ್ಯ ಜಯಮಾಲಾ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

 

ಡಯಾಬಿಟೀಸ್ ನಿಂದ ಬಳಲಿದ ಪ್ರಭಾಕರ್ ಗ್ಯಾಂಗ್ರೀನ್ ಗೆ ತುತ್ತಾದರು. ವೈದ್ಯರು ಗ್ಯಾಂಗ್ರೀನ್ ಗೆ ತುತ್ತಾದ ಕಾಲನ್ನು ಕತ್ತರಿಸಬೇಕೆಂದು ಸಲಹೆಯನ್ನಿತ್ತಾಗ ನಿರಾಕರಿಸದ ಪ್ರಭಾಕರ್ ಮುಂದೆ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿ 2001 ಮಾರ್ಚ್ 25 ರಂದು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ನಿಧನರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+