X
ಹೋಮ್ » ಸೆಲಬ್ರಿಟಿಗಳು » ಟೈಗರ್ ಪ್ರಭಾಕರ್
ಟೈಗರ್ ಪ್ರಭಾಕರ್

ಟೈಗರ್ ಪ್ರಭಾಕರ್

Actor/Director
ಜೀವನ ಚರಿತ್ರೆ :  ಟೈಗರ್ ಪ್ರಭಾಕರ್ ಕನ್ನಡ ಚಿತ್ರರಂಗದ ಧೀಮಂತ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಕನ್ನಡ ಚಿತ್ರಗಳಲ್ಲಿ ಕಂಗ್ಲೀಷ್ ಭಾಷೆಯನ್ನು ಬಳಕೆಗೆ ತಂದ ಶ್ರೇಯ ಪ್ರಭಾಕರ್ ಅವರಿಗೆ ಸಲ್ಲಬೇಕು.ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಕೂಡ ತಮ್ಮ ಅಭಿನಯ ಪ್ರೌಢಿಮೆ ಮೆರೆದಿರುವ ಇವರು ಸುಮಾರು 450 ಚಿತ್ರಗಳಲ್ಲಿ ನಟಿಸಿದ್ದಾರೆ.   1950 ರಲ್ಲಿ ಬೆಂಗಳೂರಿನ ಪುಲಕೇಶಿ ನಗರದಲ್ಲಿ ಜನಿಸಿದ ಪ್ರಭಾಕರ್ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ಇವರು ನಟಿಸಿದ ಮೊದಲ ಚಿತ್ರ `ಕಾಡಿನ ರಹಸ್ಯ'.ನಂತರ ನಾಯಕನಾಗಿ ಯಶಸ್ವಿ ಚಿತ್ರಗಳಲ್ಲಿ ನಟಿಸಿದ ಪ್ರಭಾಕರ್ ನಿರ್ಮಾಪಕರಾಗಿ `ಮಹೇಂದ್ರವರ್ಮ', `ಮಿಸ್ಟರ್ ಮಹೇಶ್ ಕುಮಾರ' ಚಿತ್ರಗಳನ್ನು ನಿರ್ಮಿಸಿದರು. ಇವರೆಡು ಚಿತ್ರಗಳು ಬಾಕ್ಸಾಫೀಸಿನಲ್ಲಿ ಯಶಸ್ವಿಯಾದವು. 80 ಮತ್ತು 90 ರ ದಶಕದಲ್ಲಿ ಎಲ್ಲಾ ಭಾಷೆಗಳಲ್ಲಿ ಬಹು ಬೇಡಿಕೆಯ ನಟನಾಗಿದ್ದರು. ನಿರ್ದೇಶಕರಾಗಿ `ಬಾಂಬೆ ದಾದಾ', `ಕಿಂಗ್',`ಯಮ ಕಿಂಕರ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.   `ಟೈಗರ್' ಚಿತ್ರದಲ್ಲಿನ ನಟನೆಯಿಂದ ಇವರಿಗೆ ಟೈಗರ್ ಬಿರುದು ಬಂದಿತು. ಸ್ಟಂಟ್ ಮ್ಯಾನ್ ಆಗಿ, ನಾಯಕನಟನಾಗಿ,ಖಳನಾಯಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ಸಂಗೀತ ನಿರ್ದೇಶಕನಾಗಿ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಸಾಧನೆ ಮಾಡಿದ್ದಾರೆ.   ಪ್ರಭಾಕರ್ ಗೆ ಮೊದಲ ಪತ್ನಿಯಿಂದ ಭಾರತಿ,ಗೀತಾ ಮತ್ತು ವಿನೋದ್ ಎಂಬ ಮೂರು ಮಕ್ಕಳಿದ್ದರೆ, ಎರಡನೇ ಪತ್ನಿ ನಟಿ ಜಯಮಾಲಾರಿಂದ ಸೌಂದರ್ಯ ಎಂಬ ಪುತ್ರಿಯಿದ್ದಾಳೆ.ಜಯಮಾಲಾರ ಜೊತೆ ವಿಚ್ಚೇದನ ನಂತರ ಮಲಯಾಳಂ ನಟಿ ಅಂಜು ರನ್ನು ವಿವಾಹವಾಗಿದ್ದ ಪ್ರಭಾಕರ್‌ಗೆ ಈ ದಂಪತಿಯಿಂದ `ಅರ್ಜುನ್' ಎಂಬ ಪುತ್ರನಿದ್ದಾನೆ. ಇವರಲ್ಲಿ ವಿನೋದ್ ಪ್ರಭಾಕರ್ ಮತ್ತು ಸೌಂದರ್ಯ ಜಯಮಾಲಾ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.   ಡಯಾಬಿಟೀಸ್ ನಿಂದ ಬಳಲಿದ ಪ್ರಭಾಕರ್ ಗ್ಯಾಂಗ್ರೀನ್ ಗೆ ತುತ್ತಾದರು. ವೈದ್ಯರು ಗ್ಯಾಂಗ್ರೀನ್ ಗೆ ತುತ್ತಾದ ಕಾಲನ್ನು ಕತ್ತರಿಸಬೇಕೆಂದು ಸಲಹೆಯನ್ನಿತ್ತಾಗ ನಿರಾಕರಿಸದ ಪ್ರಭಾಕರ್ ಮುಂದೆ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿ 2001 ಮಾರ್ಚ್ 25 ರಂದು ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ನಿಧನರಾದರು.
ಮುಂದೆ ಓದಿ

ಟೈಗರ್ ಪ್ರಭಾಕರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಟೈಗರ್ ಪ್ರಭಾಕರ್ 06 Feb 1995
ರವಿರಾಜಾ 1986
ಜೋಸೈಮನ್ 10 Feb 1982

ಟೈಗರ್ ಪ್ರಭಾಕರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಟೈಗರ್ ಪ್ರಭಾಕರ್

ಹೆಸರು ಟೈಗರ್ ಪ್ರಭಾಕರ್
ಹುಟ್ಟಿದ ದಿನ 30 Mar 1950
ವಯಸ್ಸು 76
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಟೈಗರ್ ಪ್ರಭಾಕರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+