twitter
    Celebs»Uday kumar»Biography

    ಉದಯ್ ಕುಮಾರ್ ಜೀವನಚರಿತ್ರೆ

    ಕಲಾಕೇಸರಿ  ಉದಯಕುಮಾರ್ ಕನ್ನಡ ಚಿತ್ರರಂಗದ ಕುಮಾರ ತ್ರಯರಲೊಬ್ಬರು. ನಟಸಾಮ್ರಾಟ್, ಪವನಸುತ, ಕಲಾಸಾರ್ವಭೌಮ, ನಾದಭಟ, ಕಲಾಭೀಷ್ಮ ಮುಂತಾದ ಬಿರುದುಗಳಿಂದ ಕರೆಯಲ್ಪಡುವ ಉದಯಕುಮಾರ್ ಕನ್ನಡ ಕಲಾಲೋಕ ಕಂಡ ಧೀಮಂತ ನಟ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ,ಸಂಗೀತ ನಿರ್ದೇಶಕನಾಗಿ, ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿದ್ದಾರೆ.

    1933 ಮೇ 5 ರಂದು ತಮಿಳುನಾಡಿನ ಧರ್ಮಪುರಿ ಹತ್ತಿರದ ಪಲಕ್ಕೋಡುವಿನಲ್ಲಿ ಜನಿಸಿದರು. ತಂದೆ ಬಿ.ಎಸ್.ಶ್ರೀನಿವಾಸಯ್ಯ ಮತ್ತು ತಾಯಿ ಶಾರದಮ್ಮ. 1956 ರಲ್ಲಿ ತೆರೆಕಂಡ `ಭಾಗ್ಯೋದಯ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಸುಮಾರು 170 ಕನ್ನಡ ಚಿತ್ರಗಳು ಮತ್ತು 20 ಪರಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ. ಮೂಲ ಹೆಸರು ಬೊಮ್ಮಸಂದ್ರ ಶ್ರೀನಿವಾಸಯ್ಯ ಸೂರ್ಯನಾರಾಯಣ ಮೂರ್ತಿ. ತಮ್ಮ ಮೊದಲ ಚಿತ್ರ ನಿರ್ಮಿಸಿದ ಪ್ರೊಡಕ್ಷನ್ಸ್ ಕಂಪನಿಯ ಹೆಸರನ್ನೇ ತಮ್ಮ ಹೆಸರನ್ನಾಗಿ ಮಾಡಿಕೊಂಡರು.

    ಸ್ವಾತಂತ್ರ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಉದಯಕುಮಾರ್ ನಂತರ ಕನ್ನಡದ ಖ್ಯಾತ ಸಾಹಿತಿಗಳಾದ ಅನಕೃ, ಎಂ.ರಾಮಮೂರ್ತಿ ಮುಂತಾದವರ ಜೊತೆ ಸೇರಿ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. `ಉದಯ ಕಲಾನಿಕೇತನ' ಎಂಬ ಸಂಸ್ಥೆ ಸ್ಥಾಪಸಿ ಸಮಾಜಿಕ ನಾಟಕಗಳನ್ನು ಪ್ರದರ್ಶನ ಮಾಡುವುದರೊಂದಿಗೆ ನಟನಾ ತರಬೇತಿ ನೀಡುತ್ತಿದ್ದರು. ವೃತ್ತಿ ರಂಗಭೂಮಿಯ ತಂಡಗಳ ನೆರವಾಗಲೆಂದು ,ಚಿತ್ರರಂಗದಲ್ಲಿ ಬಿಡುವಿಲ್ಲದಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದರೂ ತಿಂಗಳಿಗೆ ಒಂದು ಭಾರಿಯಾದರೂ ನಾಟಕಗಳಲ್ಲಿ ಅಭಿನಯಿಸಿತ್ತಿದ್ದರು.

    ಇವರ ಸವಿನೆನಪಿನಲ್ಲಿ ಇವರ ಪುತ್ರ ವಿಕ್ರಮ ಉದಯಕುಮಾರ್ `ಪವನಸುತ ಕೇಸರಿ ಕಲಾ ಶಾಲಾ' ಎಂಬ ದತ್ತಿ ಸಂಸ್ಥೆ ಸ್ಥಾಪಿಸಿ ಸಮಾಜಪರ ಕಾರ್ಯಗಳಲ್ಲಿ ಸಕ್ರಿಯವಾಗಿದ್ದಾರೆ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕಾಗಿ ಒಂದು `ಕಲಾಶಾಲಾ' ಕೂಡ ಸ್ಥಾಪಿಸಿದ್ದಾರೆ.  ತಮ್ಮ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

    ಉದಯಕುಮಾರ್ ರಚಿತ ಕೃತಿಗಳು
     
    ಜೀವನ ಚಿಂತನ ಸಾರ
    ಮೌನ ಕಣಾ
    ಬುತ್ತಿಯ ಕಟ್ಟಬೇಕವ್ವ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X