Celebs » V Manohar » Biography
ಜೀವನಚರಿತ್ರೆ
ವಿ ಮನೋಹರ್ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ. ಶಿಕ್ಷಣದ ಜೊತೆಯಲ್ಲೇ ಸಂಗೀತವನ್ನು ಕಲಿತು ಮನೋಹರ್ ಅವರು ಕಿರುತರೆಗಳಿಗೆ ಹಾಡುತಿದ್ದರು.

ಇವರು ತರ್ಲೆ ನನ್ನ ಮಕ್ಕಳು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಗೀತ ರಚನೆಕಾರ ಹಾಗು, ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು. ಇವರು ಅನೇಕ ಕನ್ನಡ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

೨೦೦ ಕೂ ಹೆಚ್ಚು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ನಿರ್ದೇಶಕರಾಗಿಯೂ ೩ ಚಿತ್ರಗಳನ್ನೂ ನಿರ್ಮಿಸಿ ಸೈ ಅನಿಸಿಕೊಂಡಿದ್ದಾರೆ ಮನೋಹರ್.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada