ವೆಂಕಟಪ್ಪ ಸೋಮಶೇಖರ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಸಂಭಾಷಣಾಕಾರರಾಗಿದ್ದರು. ಬೆಂಗಳೂರು ಗ್ರಾಮಾಂತರದ ಚಿಕ್ಕನಹಳ್ಳಿಯಲ್ಲಿ ಜನಿಸಿದ ಇವರು ತಮ್ಮ 40 ವರ್ಷದ ಸಿನಿ ಜೀವನದಲ್ಲಿ ಸುಮಾರು 49 ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.
ಮೊದಲು ಕೆಲ ನಿರ್ದೇಶಕರ ಕೈಕೆಳಗೆ ಸಹಾಯಕನಾಗಿ ಕೆಲಸ ಮಾಡಿದ ಇವರು 1974 ರಲ್ಲಿ ತೆರೆಕಂಡ `ಬಂಗಾರದ ಪಂಜರ' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾದರು. ನಂತರ ರಾಜ್ ಜೊತೆ `ಪ್ರೇಮದ ಕಾಣಿಕೆ',`ಶಂಕರ ಗುರು',`ತಾಯಿಗೆ ತಕ್ಕ ಮಗ' ಶಂಕರನಾಗ್ ಜೊತೆ `ಸೀತಾರಾಮು',ಆರದ ಗಾಯ', ವಿಷ್ಣು ಜೊತೆ `ಚಾಣಕ್ಯ',ಈ ಜೀವ ನಿನಗಾಗಿ', ಅಂಬರೀಶ್ ಜೊತೆ `ಮೃಗಾಲಯ',ಚಕ್ರವ್ಯೂಹ' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡ ನಿರ್ದೇಶಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನರ್ವಹಿಸಿರುವ ಇವರು `ಪುಟ್ಟಣ್ಣ ಕಣಗಾಲ್' ಪ್ರಶಸ್ತಿ ವಿಜೇತರು.