twitter
    Celebs»Vaidhyanathan L»Biography

    ವೈಧ್ಯನಾಥನ್ ಎಲ್ ಜೀವನಚರಿತ್ರೆ

    ಲಕ್ಷ್ಮಿನಾರಾಯಣ ವೈದ್ಯನಾಥನ್ ಕನ್ನಡ ಮತ್ತು ತಮಿಳು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕರು.ತಂದೆಯಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ತರಬೇತಿ ಪಡೆದ ಇವರು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ರವರ ಸಹಾಯಕರಾಗಿ ವೃತ್ತಿಜೀವನ ಆರಂಭಿಸಿದ ಇವರು ನಂತರದಲ್ಲಿ ಕನ್ನಡದಲ್ಲಿ ಸಿ.ಅಶ್ವಥ್ ರ ಜೊತೆಗೂಡಿ ಚಿತ್ರಗಳಿಗೆ ಸಂಗೀತ ನೀಡತೊಡಗಿದರು. `ಅಶ್ವಥ್-ವೈದಿ' ಎಂಬ ಅಡಿಬರಹದಲ್ಲಿ `ನಾರದ ವಿಜಯ',`ಅಲೆಮನೆ',`ಅನುಪಮ' ಮುಂತಾದ ಚಿತ್ರಗಳಿಗೆ ಅಶ್ವಥ್ ರ ಜೊತೆ ಸಂಗೀತ ನೀಡಿದ ಇವರು ನಂತರ ಒಬ್ಬರೇ ಸಂಗೀತ ನೀಡಲು ಆರಂಭಿಸಿದರು. ತಮಿಳು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ತಮಿಳುನಾಡು ಸರ್ಕಾರ `ಕಲೈಮಾಮಣಿ' ಪ್ರಶಸ್ತಿ ನೀಡಿ ಗೌರವಿಸಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X