X
ವೈಷ್ಣವಿ ಗೌಡ
Actress

ವೈಷ್ಣವಿ ಗೌಡ ಜೀವನ ಚರಿತ್ರೆ

ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. `ಅಗ್ನಿ ಸಾಕ್ಷಿ' ಸೀರಿಯಲ್ ಮೂಲಕ ಮನೆ ಮಾತಾಗಿರುವ ವೈಷ್ಣವಿ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.

ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದರು.

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಇವರು ತಮ್ಮ ನಿರತ ನಟನೆಯಿಂದ ಪದವಿ ಅರ್ಧಕ್ಕೆ ಬಿಟ್ಟರು. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದರು.ಭರತನಾಟ್ಯಂ,ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ ಇವರು `ಗಿರಿಗಿಟ್ಲೆ' ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು.

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+