ವರ್ಷ ಬಿ ಸುರೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿನ್ನಲೆ ಗಾಯಕಿ .ಬಾಲ್ಯದಲ್ಲಿ ಐದು ವರ್ಷದವರಿದ್ದಾಗಿನಂದಲೇ ಸಂಗೀತ ಕಲಿಯಲು ಆರಂಭಿಸಿದ ಇವರು ಎಂಟು ವಯಸ್ಸಿನವರಾಗುವಷ್ಟರಲ್ಲೇ ಶೋಗಳಲ್ಲಿ ಹಾಡಲು ಆರಂಭಿಸಿದರು. ಮೂಲತಃ ಬೆಂಗಳೂರಿನವರಾದ ಇವರ ಸಂಗೀತ ಪಯಣದ ಹಿಂದೆ ಇವರ ತಂದೆ-ತಾಯಿಗಳಾದ ಸುರೇಶ್ ಮತ್ತು ಮೀನಾಕ್ಷೀ ದಂಪತಿಗಳ ಪ್ರೋತ್ಸಾಹ ತುಂಬಾ ಇದೆ. ಕನ್ನಡದ ಜನಪ್ರಿಯ ಕವಿಗಳ ಅನೇಕ ಭಾವಗೀತೆಳನ್ನು ಹಾಡುವ ಮೂಲಕ ಪ್ರಸಿದ್ಧಿಯಾದ ಇವರು ಫಸ್ಟ್ ಪಿಯುಸಿ ಓದುವಾಗಿನಿಂದ ರಿಕಾರ್ಡಿಂಗ್ ಹಾಡಲು ಆರಂಭಿಸಿದರು. ಇವರು ಹಾಡಿರುವ ಭಾವಗೀತೆಗಳ ಅಲ್ಬಮ್ `ವರ್ಷಧಾರೆ' ಎಂಬ ಹೆಸರಿನಿಂದ ಬಿಡುಗಡೆಯಾಗಿದೆ.
2008 ಮತ್ತು 2012 ರಲ್ಲಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಹಾಡಿರುವ ಇವರು ಹಾಡಿದ ಸಿನಿಮಾ `ಭಾವನೆಗಳ ಬೆನ್ನೇರಿ'. ಮೊದಮೊದಲು ಶಾಸ್ತ್ರೀಯ ಸಂಗೀತ ಗೀತೆಗಳನ್ನು ಹಾಡುತ್ತಿದ್ದ ಇವರು ನಂತರ ಭಾವಗೀತೆಗಳ ಕಡೆಗೆ ಒಲವು ತೋರಿದರು. ತಮ್ಮದೇ ಒಂದು ತಂಡ ಕಟ್ಟಿಕೊಂಡು ಕಾರ್ಯಕ್ರಮಗಳನ್ನು ನೀಡುತ್ತಿದ್ದರು. 2019 ರಲ್ಲಿ ತೆರಕಂಡ ದರ್ಶನ್‌ರ `ಯಜಮಾನ' ಚಿತ್ರದ ಬಸಣ್ಣಿ ಹಾಡಿನ ಮೂಲಕ ಪ್ರಸಿದ್ಧಿ ಪಡೆದರು.