ಅರೆಸ್ಟ್: ವರ್ತೂರ್ ಸಂತೋಷ್ ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ವನ್ಯಜೀವಿ ಕಾಯಿದೆ ಪ್ರಕಾರ ಇದು ತಪ್ಪು. ಈ ಕುರಿತು ಸಂತೋಷ್ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಹಾಗಾಗಿ ಅವರನ್ನು ಬಿಗ್‌ಬಾಸ್ ಮನೆಯಿಂದ ಹೊರ ಕರೆತಂದು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ನಂತರ ಜಾಮೀನು ಪಡೆದು ಹೊರಬಂದ ವರ್ತೂರು ಸಂತೋಷ್, ಮತ್ತೆ ಬಿಗ್‌ಬಾಸ್ ಮನೆಗೆ ತೆರಳಿದ್ದಾರೆ.