ವಾಸುಕಿ ವೈಭವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕ. ಜನಿಸಿದ್ದು ಮೈಸೂರಿನಲ್ಲಿ. ತಂದೆ ಕೆ.ಜಯರಾಮ್ ರಂಗಭೂಮಿ ಕಲಾವಿದರು.ಮಗ ಸುಬ್ರಹ್ಮಣ್ಯ ಸ್ವಾಮಿಯ ಕೃಪೆ ಎಂದು ವಾಸುಕಿಯವರ ತಂದೆ ಇವರನ್ನು ಸುಬ್ಬು ಎಂದೇ ಕರೆಯುತ್ತಿದ್ದರು. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು
ನಾಟಕ ಮಾಡುವ ಅಪಾರ ಹುಚ್ಚು ಇದ್ದ ಇವರು ಗೀತರಚನೆಯೊಂದಿಗೆ ಅವುಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡುತ್ತಿದ್ದರು. 2016 ರಲ್ಲಿ ತೆರೆಕಂಡ ರಾಮಾ ರಾಮಾ ರೇ ಚಿತ್ರದ ಸಂಗೀತದಿಂದ ಇವರು ಪ್ರಸಿದ್ಧಿ ಪಡೆದರು.ರಾಮಾ ರಾಮಾ ರೇ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ ವಾಸುಕಿಯವರ ತಂದೆ ಜಯರಾಮ್ ರವರು ಚಿತ್ರದ ಕೊನೆಯ ದೃಶ್ಯದ ಚಿತ್ರೀಕರಣಕ್ಕೂ ಮುಂಚೆ ಹೃದಯಾಘಾತದಿಂದ ನಿಧನರಾದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಸಂಗೀತ ಇವರಿಗೆ ಇನ್ನಷ್ಟು ಕೀರ್ತಿ ತಂದು ಕೊಟ್ಟಿತು.