ವೇದಿಕಾ ತಮಿಳು ಚಿತ್ರರಂಗದ ಪ್ರಮುಖ ನಟಿ. ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದ ಇವರು, ಬಾಲ್ಯದ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಕರ್ನಾಟಕದ ಬೆಂಗಳೂರಿನಲ್ಲಿ. ಕಾರ್ಡಿಫ್ ಯುನಿವರ್ಸಿಟಿಯಿಂದ ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆದಿರುವ ಇವರು, 2006ರಲ್ಲಿ ತೆರೆಕಂಡ `ಮದ್ರಾಸಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.
ನಂತರ ತಮಿಳು, ತೆಲುಗು, ಮಲಯಾಳಂ, ಕನ್ನಡ ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. 2008ರಲ್ಲಿ ತೆರೆಕಂಡ ಸಂಗಮ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಇವರು, ನಂತರ ಶಿವಲಿಂಗ, ಗೌಡ್ರು ಹೋಟೆಲ್, ಕಾಂಚನ 3, ಹೋಮ್ ಮಿನಿಸ್ಟರ್ ಹಾಗೂ ಗಣ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.